6 ನಿಮಿಷದ ಭಾಷಣಕ್ಕೆ 60 ಬಾರಿ ಅಡ್ಡಿಪಡಿಸಿದ್ದ ಮೀರಾ: ವಿಡಿಯೋ ಬಿಡುಗಡೆ ಮಾಡಿದ ಸುಷ್ಮಾ

By Suvarna Web DeskFirst Published Jun 25, 2017, 7:47 PM IST
Highlights

ಈ ಸಂದರ್ಭದಲ್ಲಿ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಅವರು 6 ನಿಮಿಷದಲ್ಲಿಭಾಷಣ ಮಾಡಲು ಬಿಡದೆ 60 ಬಾರಿ ಅಡ್ಡಿಪಡಿಸಿದ್ದರು

ನವದೆಹಲಿ(ಜೂ.25): ವಿರೋಧ ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮೀರಾ ಕುಮಾರಿ ಅವರು ತಮ್ಮ 6 ನಿಮಿಷದ ಭಾಷಣಕ್ಕೆ 60 ಬಾರಿ ಅಡ್ಡಿಪಡಿಸಿದ್ದರು ಎಂದು ಆರೋಪಿಸಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2013ರಲ್ಲಿ ತಾವು ಲೋಕಸಭೆಯಲ್ಲಿ ಭಾಷಣ ಮಾಡುತ್ತಿದ್ದು, ಸರ್ಕಾರದ ಭ್ರಷ್ಟಾಚಾರದ ಬಗ್ಗೆ ವಿವರಿಸುತ್ತಿದೆ. ಈ ಸಂದರ್ಭದಲ್ಲಿ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಅವರು 6 ನಿಮಿಷದಲ್ಲಿ  ಭಾಷಣ ಮಾಡಲು ಬಿಡದೆ 60 ಬಾರಿ ಅಡ್ಡಿಪಡಿಸಿದ್ದರು. ಕಲ್ಲಿದ್ದಲು ಹಗರಣದ ಬಗ್ಗೆ ಮಾತನಾಡುತ್ತಿದ್ದಾಗ ಮೀರಾ ಅವರು 'ಸರಿ' ಧನ್ಯವಾದಗಳು, ನಾನು ಮುಂದುವರುಯುತ್ತೇನೆ, ಎಂದು ತೊಂದರೆ ಪಡಿಸುತ್ತಿದ್ದರು.

ಟ್ವಿಟರ್'ನಲ್ಲಿ ಬಿಡುಗಡೆ ಮಾಡಿರುವ ಸುಷ್ಮಾ ಅವರು ವಿಡಿಯೋದಲ್ಲಿ 'ಸ್ವತಂತ್ರ್ಯಾ ನಂತರದ ಸರ್ಕಾರಗಳಲ್ಲಿ ಯುಪಿಎ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ತೆಗಳಿದ್ದು, ಗದ್ದಲವೆಬ್ಬಿಸುತ್ತಿದ್ದ ತಮ್ಮದೆ ಪಕ್ಷದ ಮಂತ್ರಿಗಳನ್ನು ಸ್ವೀಕರ್ ತಡೆಯಲಿಲ್ಲ. ಹೆಚ್ಚು ಬಾರಿ ತಡೆಯುಂಟಾದಾಗ ಸುಷ್ಮಾ ಅವರು ಸಭಾತ್ಯಾಗ ಮಾಡಿದರು.

ಮುಂದಿನ ತಿಂಗಳು ನಡೆಯುವ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಎನ್'ಡಿಎ ಅಭ್ಯರ್ಥಿಯಾಗಿ ರಾಮ್'ನಾಥ್ ಕೋವಿಂದ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ವಿರೋಧ ಪಕ್ಷದಿಂದ ಮೀರಾ ಕುಮಾರ್ ಸ್ಪರ್ಧಿಸುತ್ತಿದ್ದಾರೆ.

click me!