
ನವದೆಹಲಿ[ಏ.07]: ಟ್ವೀಟರ್ ಎಂಬ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ದೇಶ- ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಬಹುದು ಎಂಬುದನ್ನು ಯಶಸ್ವಿಯಾಗಿ ತೋರಿಸಿಕೊಟ್ಟವರು ಸುಷ್ಮಾ ಸ್ವರಾಜ್. ಹೊತ್ತಲ್ಲದ ಹೊತ್ತಲ್ಲಿ ಬರುವ ಕೋರಿಕೆಗಳಿಗೆ ಸುಷ್ಮಾ ಸ್ಪಂದಿಸುತ್ತಿದ್ದರು.
ವಿದೇಶದಲ್ಲಿ ಪಾಸ್‌ಪೋರ್ಟ್ ಕಳೆದು ಹೋಗಿದೆ, ವಿದೇಶದಲ್ಲಿ ಪತಿ ದಿಢೀರ್ ನಾಪತ್ತೆಯಾಗಿದ್ದಾರೆ, ಹನಿಮೂನ್‌ಗೆ ಹೋಗಲು ಬಯಸಿದ್ದೇವೆ, ಪಾಸ್‌ಪೋರ್ಟ್ ಸಿಗುತ್ತಿಲ್ಲ ಎಂಬ ಕೋರಿಕೆಗಳಿಗೂ ತ್ವರಿತವಾಗಿ ಸುಷ್ಮಾ ಸ್ಪಂದಿಸಿದ್ದರು.
ಮರೆಯಾದ ಮಾತೃ ಹೃದಯಿ ಸುಷ್ಮಾ ಸ್ವರಾಜ್: ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅದರಲ್ಲೂ ಉಜ್ಮಾ ಅಹಮದ್ ಎಂಬ ಯುವತಿಯ ಕಣ್ಣೀರ ಕತೆಯಲ್ಲಿ ಸುಷ್ಮಾ ಭಾಗಿಯಾಗಿದ್ದರು. ಪಾಕಿಸ್ತಾನದಲ್ಲಿ ಬಲವಂತಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದ ಉಜ್ಮಾಳನ್ನು ರಕ್ಷಿಸಿ ಭಾರತಕ್ಕೆ ಕರೆತರುವಲ್ಲಿ ಸುಷ್ಮಾ ಸಫಲರಾಗಿದ್ದರು.
ಸಂಝೌತಾ ರೈಲಿನ ಮೂಲಕ 8 ವರ್ಷದ ಬಾಲಕಿಯಾಗಿದ್ದಾಗ ಪಾಕಿಸ್ತಾನಕ್ಕೆ ಹೋಗಿದ್ದ ಇಂದೋರ್‌ನ ಕಿವುಡ- ಮೂಕ ಯುವತಿ ಗೀತಾ ಎಂಬಾಕೆಯನ್ನು 15 ವರ್ಷಗಳ ಬಳಿಕ ಸ್ವದೇಶಕ್ಕೆ ಕರೆಸುವಲ್ಲಿ ಸುಷ್ಮಾ ಯಶಸ್ವಿಯಾಗಿದ್ದರು. ಆಕೆಗೆ ಅವರು ತಾಯಿ ಪ್ರೀತಿ ತೋರಿದ್ದರು. ಆಕೆ ಜೀವನಕ್ಕೂ ಸುಷ್ಮಾ ಸಾಕಷ್ಟು ನೆರವಾಗಿದ್ದರು.
ಸುಷ್ಮಾ ಸ್ವರಾಜ್ ರಾಕ್‌ಸ್ಟಾರ್ ಎಂದು ಸಾಬೀತುಪಡಿಸಿದ 5 ಟ್ವೀಟ್‌ಗಳು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.