ರಾಹುಲ್ ಗಾಂಧಿ ವಿರುದ್ಧ ಧ್ವನಿ ಎತ್ತಿದ ಸಿಂಧಿಯಾ!

Published : Aug 07, 2019, 07:46 AM IST
ರಾಹುಲ್ ಗಾಂಧಿ ವಿರುದ್ಧ ಧ್ವನಿ ಎತ್ತಿದ ಸಿಂಧಿಯಾ!

ಸಾರಾಂಶ

ರಾಹುಲ್‌ಗೆ ಜ್ಯೋತಿರಾಧಿತ್ಯ ಸಿಂಧಿಯಾ ಸಡ್ಡು| ರಾಹುಲ್‌ಗೆ ವಿರುದ್ಧ ಧ್ವನಿ ಎತ್ತಿದ ರಾಹುಲ್‌ ಆಪ್ತ ಸಿಂಧಿಯಾ| ದೇಶದ ವಿಚಾರದಲ್ಲಿ ರಾಜಕೀಯ ಸಲ್ಲ: ದ್ವಿವೇದಿ, ಮಿಲಿಂದ್‌| 370 ರದ್ದಿಗೆ ಕಾಂಗ್ರೆಸ್‌ ವಿರೋಧ: ಕಾಂಗ್ರೆಸ್‌ ನಾಯಕರ ಸ್ವಾಗತ!

ದೆಹ​ಲಿ[ಆ.07]: 370ನೇ ವಿಧಿ ರದ್ದು ಮಾಡಿದ ಕೇಂದ್ರದ ನಿರ್ಧಾ​ರವನ್ನು ವಿರೋಧ ಮಾಡಿದ್ದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಒಂದೆಡೆ ಸೋನಿಯಾ ಮತ್ತು ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿದ್ದರೆ, ಕೆಲ ಹಿರಿ- ಕಿರಿ ನಾಯ​ಕರು ಬಹಿರಂಗವಾಗಿಯೇ ಸರ್ಕಾರದ ನಿರ್ಧಾರ ಬೆಂಬಲಿಸುವ ಮೂಲಕ ಪಕ್ಷಕ್ಕೆ ಸಡ್ಡು ಹೊಡೆದಿದ್ದಾರೆ.

ಅದರಲ್ಲೂ ರಾಹು​ಲ್‌ ಗಾಂಧಿ ಆಪ್ತ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌​ನ​ಲ್ಲಿ​ರುವ ಜ್ಯೋತಿ​ರಾ​ಧಿತ್ಯ ಸಿಂಧಿಯಾ ಕೇಂದ್ರದ ಪರ​ವಾಗಿ ನಿಂತಿದ್ದು ಕೈ ಪಾಲಿಗೆ ಹಿನ್ನ​ಡೆ​ಯಾ​ಗಿದೆ. ಈ ಸಂಬಂಧ ಟ್ವೀಟ್‌ ಮಾಡಿ​ರುವ ಅವರು ಕೇಂದ್ರದ ಈ ನಿರ್ಧಾ​ರ​ವನ್ನು ನಾನು ಬೆಂಬ​ಲಿ​ಸು​ತ್ತೇನೆ. ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಉತ್ತಮವಾಗುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಬಹುದಿತ್ತು. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತದೃಷ್ಟಿಯಿಂದ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಹೇಳಿ​ದ್ದಾ​ರೆ.

ಇನ್ನು ಕೈ ಹಿರಿಯ ನಾಯ​ಕರಾದ ಜನಾ​ರ್ಧನ್‌ ದ್ವಿವೇದಿ ಹಾಗೂ ದೀಪೆಂದರ್‌ ಹೂಡ 370ನೇ ವಿಧಿ​ಯನ್ನು ರದ್ದು ಮಾಡಿದ ಕೇಂದ್ರದ ನಿಲು​ವನ್ನು ಸ್ವಾಗತಿಸಿ​ದ್ದು, ರಾಷ್ಟ್ರತ ಹಿತ​ಕ್ಕಾಗಿ ಈ ನಿರ್ಧಾರ ತೆಗೆ​ದು​ಕೊಳ್ಳಲಾ​ಗಿದ್ದು ಹಾಗಾಗಿ ನಾವು ಕೇಂದ್ರದ ಈ ನಿರ್ಧಾ​ರ​ವ​ನ್ನು ಸ್ವಾಗ​ತಿ​ಸು​ತ್ತೇವೆ. ಇದ​ರಿಂದಾಗಿ ಕಾಶ್ಮೀರ ಸಂಬಂಧ ಉಂಟಾ​ಗಿ​ದ್ದ ಐತಿ​ಹಾಸಿಕ ಪ್ರಮಾ​ದ ಅಳಿ​ಸಿ​ದಂತಾ​ಗಿದೆ ಎಂದಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2700 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಮಣಿಪುರ ಮಿಜೋರಾಂನಲ್ಲಿ ವಾಸಿಸುವ ಇಸ್ರೇಲಿಗರು ಮತ್ತೆ ತವರಿಗೆ
1997ರಲ್ಲಿ ಜನರ ಹೊಸ ವರ್ಷದ ರೆಸಲ್ಯೂಷನ್ ಹೀಗಿತ್ತು: ವೀಡಿಯೋ ಭಾರಿ ವೈರಲ್