ಸೇನೆಗೆ ಲಾಹೋರ್‌ಗೂ ನುಗ್ಗುವ ಶಕ್ತಿ ಇದೆ: ಆರ್‌ಎಸ್‌ಎಸ್‌!

First Published Jul 1, 2018, 11:40 AM IST
Highlights

ಸೇನೆಗೆ ಲಾಹೋರ್‌ಗೂ ನುಗ್ಗುವ ಶಕ್ತಿ ಇದೆ

ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್ ಕುಮಾರ್

ಸರ್ಜಿಕಲ್ ಸ್ಟ್ರೈಕ್‌ನಿಂದ ಸೇನಾ ಶಕ್ತಿ ಸಾಬೀತು

ಅಖಂಡ ಭಾರತ ಪರಿಕಲ್ಪನೆ ಸಾಧ್ಯ ಎಂದ ಇಂದ್ರೇಶ್ 

ನವದೆಹಲಿ(ಜು.1): ಭಾರತೀಯ ಸೇನೆ ಕೇವಲ ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲ, ಲಾಹೋರ್ ಗೂ ನುಗ್ಗಿ ತನ್ನ ಶುತೃಗಳನ್ನು ಹೊಡೆದುರುಳಿಸಬಲ್ಲದು ಎಂಬುದು ಸರ್ಜಿಕಲ್ ದಾಳಿಯಿಂದ ಸಾಬೀತಾಗಿದೆ ಎಂದು ಆರ್ ಎಸ್ಎಸ್ ಹೇಳಿದೆ.

ಈ ಕುರಿತು ಮಾತನಾಡಿರುವ ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್, ಭಾರತೀಯ ಸೇನೆ ಲಾಹೋರ್ ಗೂ ನುಗ್ಗಿ ತನ್ನ ಶುತೃಗಳನ್ನು ಹೊಡೆದುರುಳಿಸಬಲ್ಲದು ಎಂಬ ಸಂದೇಶವನ್ನು ಸರ್ಜಿಕಲ್ ದಾಳಿಯಿಂದ ನೀಡಿದೆ ಎಂದಿದ್ದಾರೆ. ಭಾರತ ಇಚ್ಛಿಸಿದರೆ, ಪಾಕಿಸ್ತಾನದ ಯಾವುದೇ ಮೂಲೆಗೂ ನುಗ್ಗಿ ಉಗ್ರರನ್ನು ಮಟ್ಟ ಹಾಕುತ್ತದೆ. ಆ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದ ವೇಳೆ ಸುಮಾರು 300ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದು ಈ ಹಿಂದಿನ ಯಾವುದೇ ಸರ್ಕಾರ ಮಾಡಿರದ ಸಾಧನೆಯಾಗಿದೆ.  ಕಾಶ್ಮೀರದಲ್ಲಿ ಕೆಲ ಯೋಜನೆಗ ಗುರಿ ಸಾಧಿಸಲು ಪಿಡಿಪಿಯೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಗುರಿ ಸಾಧನೆ ಬಳಿಕ ಸರ್ಕಾರದಿಂದ ಹೊರ ಬಂದು ಕಾಶ್ಮೀರದ ಹಿತಾಸಕ್ತಿ ದೃಷ್ಟಿಯಿಂದ ಅಧಿಕಾರ ತ್ಯಾಗ ಮಾಡಿದ್ದಾಗಿ ಅವರು ತಿಳಿಸಿದರು. 

ಇದೇ ವೇಳೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಇಂದ್ರೇಶ್, ಅಖಂಡ ಭಾರತ (ಪಾಕಿಸ್ತಾನವನ್ನೂ ಒಳಗೊಂಡಂತೆ) ಪರಿಕಲ್ಪನೆ ಯಾವಾಗ ಬೇಕಾದರೂ ನನಸಾಗಬಹುದು ಎಂದು ಹೂಂಕರಿಸಿದ್ದಾರೆ.

click me!