
ವಾಷಿಂಗ್ಟನ್: ಕೆಲವು ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳ ಜನರಿಗೆ ತಮ್ಮ ದೇಶಕ್ಕೆ ಪ್ರಯಾಣಿಸುವುದಕ್ಕೆ ನಿಷೇಧ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ಅಲ್ಲಿನ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದೆ.
ದೇಶದ ಭದ್ರತೆಗೆ ಈ ದೇಶಗಳ ಜನರಿಂದ ಅಪಾಯ ಇದೆ ಎಂದಾದಲ್ಲಿ ಅವರು ದೇಶ ಪ್ರವೇಶಿಸದಂತೆ ನಿಷೇಧ ಹೇರುವ ಅಧಿಕಾರ ಟ್ರಂಪ್‌ಗೆ ಇದೆ ಎಂದು ಸುಪ್ರೀಂಕೋರ್ಟ್ 5-4 ಮತಗಳಿಂದ ತೀರ್ಪು ನೀಡಿದೆ.
ಇರಾನ್, ಉತ್ತರ ಕೊರಿಯಾ, ಸಿರಿಯಾ, ಲಿಬಿಯಾ, ಯಮೆನ್, ಸೊಮಾಲಿಯಾ ಮತ್ತು ವೆನೆಜುಲಾದಂತಹ ಮುಸ್ಲಿಂ ಜನಸಂಖ್ಯೆ ಅಧಿಕವಿರುವ ರಾಷ್ಟ್ರಗಳ ಜನರಿಗೆ ಅಮೆರಿಕ ಪ್ರವೇಶಕ್ಕೆ ಟ್ರಂಪ್ ನಿರ್ಬಂಧ ಹೇರಿದ್ದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತಮ್ಮ ಚುನಾವಣಾ ಭರವಸೆ ಈಡೇರಿಸುವ ಸಲುವಾಗಿ ಟ್ರಂಪ್ ಈ ನಿರ್ಧಾರ ಪ್ರಕಟಿಸಿದ್ದರು. ಆದರೆ ಅವರ ಈ ಆದೇಶವನ್ನು ಹಲವು ಕೆಳಹಂತದ ನ್ಯಾಯಾಲಯಗಳು ವಜಾಮಾಡಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.