ಶಬರಿಮಲೆಗೆ ಸ್ತ್ರೀಪ್ರವೇಶ: ಈಗ ನ.5, 6ರ ಕುತೂಹಲ!

Published : Oct 24, 2018, 08:41 AM IST
ಶಬರಿಮಲೆಗೆ ಸ್ತ್ರೀಪ್ರವೇಶ: ಈಗ ನ.5, 6ರ ಕುತೂಹಲ!

ಸಾರಾಂಶ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತೀರ್ಪಿನ ಕುರಿತು ಅಯ್ಯಪ್ಪ ಭಕ್ತರ ಸಂಘ ಸೇರಿದಂತೆ 19 ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸು ಸುಪ್ರೀಂ ಕೋರ್ಟ್ ಮುಂದಾಗಿದೆ. ಆದರೆ ಇದಕ್ಕೂ ಮುನ್ನ 2 ದಿನಗಳ ಕಾಲ ಅಯ್ಯಪ್ಪ ದೇಗುಲ ಭಕ್ತರಿಗಾಗಿ ತೆರಯಿಲಿದೆ. 

ನವದೆಹಲಿ(ಅ.24): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿರುವ ತನ್ನದೇ ನಿರ್ಧಾರವನ್ನು ಪ್ರಶ್ನಿಸಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನವೆಂಬರ್‌ 13ರ ಮಧ್ಯಾಹ್ನ 3ಕ್ಕೆ ನಡೆಸಲಿದೆ.

ಅಯ್ಯಪ್ಪ ಭಕ್ತರ ಸಂಘ ಸೇರಿದಂತೆ 19 ಮರುಪರಿಶೀಲನಾ ಅರ್ಜಿಗಳ ಹಣೆಬರಹ ನಿರ್ಧರಿಸುವ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ ರಂಜನ್‌ ಗೊಗೋಯ್‌ ಹಾಗೂ ನ್ಯಾ ಸಂಜಯ್‌ ಕಿಶನ್‌ ಕೌಲ್‌ ಅವರ ನ್ಯಾಯಪೀಠ, ನವೆಂಬರ್‌ 13ರಂದು ವಿಚಾರಣೆ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ ಎಂದರು.

ಆದರೆ ಸುಪ್ರೀಂಕೋರ್ಟ್‌ನ ಈ ವಿಚಾರಣೆಗೂ ಮುನ್ನವೇ ಅಂದರೆ ನ.5 ಮತ್ತು 6ರಂದು 2 ದಿನಗಳ ಕಾಲ ಶಬರಿಮಲೆ ದೇಗುಲದ ಬಾಗಿಲು ವಿಶೇಷ ಪೂಜೆಗಾಗಿ ತೆರೆಯಲಿದೆ. ಹೀಗಾಗಿ ಆ 2 ದಿನಗಳಂದು ಮತ್ತೆ 10-50ರ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ದೇಗುಲ ಪ್ರವೇಶಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಕೋರ್ಟ್‌ ಅನುಮತಿ ನೀಡಿದ್ದರು, ಅಯ್ಯಪ್ಪನ ಭಕ್ತರು ಮಾತ್ರ, ಪ್ರವೇಶಕ್ಕೆ ಯತ್ನಿಸಿದ 10ಕ್ಕೂ ಹೆಚ್ಚು ಮಹಿಳೆಯರನ್ನು ತಡೆದು ಕಳುಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ 2ನೇ ರಾಜಧಾನಿ ಬೆಳಗಾವಿಗೆ ಉತ್ತಮ ಭವಿಷ್ಯ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಲೋಕಸಭೆಯಲ್ಲಿ 2 ರೈತಪರ ಮಸೂದೆ ಮಂಡನೆ: ಸಂಸದ ಡಾ.ಕೆ.ಸುಧಾಕರ್