
ನವದೆಹಲಿ (ಆ. 29): ವಿಶ್ವಪ್ರಸಿದ್ಧ ತಾಜ್‌ಮಹಲ್ ಸಂರಕ್ಷಣೆಗೆ ದೃಷ್ಟಿಕೋನ ವರದಿ (ವಿಷನ್ ಡಾಕ್ಯುಮೆಂಟ್) ಸಿದ್ಧಪಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದೇ ವೇಳೆ, ತಾಜ್ ಟ್ರಾಪಿಸಿಯಂ ವಲಯ(ಟಿಟಿಜಡ್) ಮತ್ತು ಅಲ್ಲಿನ ಕೈಗಾರಿಕೆಗಳ ಮಾಲಿನ್ಯದಂತಹ ವಿಷಯಗಳನ್ನು ವರದಿಯಲ್ಲಿ ಪರಿಗಣಿಸಬೇಕೆಂದು ವರದಿಯಲ್ಲಿ ಕೋರ್ಟ್ ಸೂಚಿಸಿದೆ. 10,400 ಚದರ ಕಿ.ಮೀ. ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್, ಹತ್ರಾಸ್, ಇಟಾ ಮತ್ತು ರಾಜಸ್ಥಾನದ ಭರತ್‌ಪುರ ಜಿಲ್ಲೆಗಳಲ್ಲಿನ 10,400 ಚ.ಕಿ.ಮೀ. ವಿಸ್ತಾರದಲ್ಲಿ ಟಿಟಿಜಡ್ ಇದೆ.
ಒಂದು ಬಾರಿ ತಾಜ್ ನಾಶವಾದರೆ, ನಿಮಗೆ ಮತ್ತೊಂದು ಅವಕಾಶ ಸಿಗಲಾರದು ಎಂದು ನ್ಯಾ. ಮದನ್ ಲೋಕುರ್ ನ್ಯಾಯಪೀಠ ಎಚ್ಚರಿಸಿದೆ.
ಈ ನಡುವೆ, ಕೋರ್ಟ್‌ಗೆ ಹೇಳಿಕೆ ನೀಡಿದ ಸರ್ಕಾರ, ಆಗ್ರಾವನ್ನು ಪರಂಪರಾ ನಗರ ಎಂದು ಘೋಷಿಸುವ ಪ್ರಸ್ತಾಪ ರವಾನಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಸೂಚಿಸಲಾಗಿದೆ ಎಂದಿದೆ. ಇನ್ನು ತಿಂಗಳೊಳಗೆ ಕೇಂದ್ರದ ಸೂಚನೆಗೆ ಪ್ರತಿಕ್ರಿಯಿಸಲಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರ ಇದೇ ವೇಳೆ ಕೋರ್ಟ್‌ಗೆ ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.