ಸುಪ್ರೀಂ ಆದೇಶ: ಬಂಗಲೆ ತೆರವಿಗೆ ಯುಪಿಯ 4 ಮಾಜಿ ಸಿಎಂಗಳು ಸಜ್ಜು

First Published Jun 2, 2018, 9:24 AM IST
Highlights

ವಾರಾಂತ್ಯದೊಳಗೆ ಸರ್ಕಾರ ನೀಡಿದ್ದ ಅಧಿಕೃತ ಬಂಗಲೆ ತೆರವುಗೊಳಿಸಬೇಕೆಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಿಗೆ ಸುಪ್ರೀಂಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಉತ್ತರಪ್ರದೇಶದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಬಂಗಲೆ ತೆರವು ಮಾಡಲು ಸಿದ್ಧರಾಗಿದ್ದಾರೆ. 

ಲಖನೌ (ಜೂ. 02): ವಾರಾಂತ್ಯದೊಳಗೆ ಸರ್ಕಾರ ನೀಡಿದ್ದ ಅಧಿಕೃತ ಬಂಗಲೆ ತೆರವುಗೊಳಿಸಬೇಕೆಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಿಗೆ ಸುಪ್ರೀಂಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಉತ್ತರಪ್ರದೇಶದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಬಂಗಲೆ ತೆರವು ಮಾಡಲು ಸಿದ್ಧರಾಗಿದ್ದಾರೆ. 

ಮೇ.7ರಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬಳಿಕ 6 ಮಾಜಿ ಮುಖ್ಯಮಂತ್ರಿಗಳಾದ, ನಾರಾಯಣ ದತ್‌ ತಿವಾರಿ, ಮುಲಾಯಾಂ ಸಿಂಗ್‌ ಯಾದವ್‌, ಕಲ್ಯಾಣ್‌ ಸಿಂಗ್‌, ಮಾಯಾವತಿ, ರಾಜ್‌ನಾಥ್‌ ಸಿಂಗ್‌ ಮತ್ತು ಅಖಿಲೇಶ್‌ ಯಾದವ್‌ ಅವರಿಗೆ ಬಂಗಲೆ ತೆರೆವುಗೊಳಿಸುವಂತೆ ನೋಟಿಸ್‌ ನೀಡಲಾಗಿತ್ತು. ಈ ಹಿನ್ನೆಲೆ ಮಾಜಿ ಸಿಎಂಗಳಾದ ತಿವಾರಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಹೊರತು ಪಡಿಸಿ ಉಳಿದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಬಂಗಲೆ ತೆರವುಗೊಳಿಸಲು ನಿರ್ಧರಿಸಿದ್ದಾರೆ. 

click me!