ತಾಜ್ ಮಹಲ್ ಬಳಿ ಪಾರ್ಕಿಂಗ್ ಕಟ್ಟಡ ನಿರ್ಮಾಣ :ಸುಪ್ರೀಂ ಆದೇಶದಿಂದ ಸಿಎಂ ಯೋಗಿಗೆ ಹಿನ್ನಡೆ

By Suvarna Web DeskFirst Published Oct 24, 2017, 9:26 PM IST
Highlights

ಪರಿಸರವಾದಿ ಹಾಗೂ ವಕೀಲರು ಆಗಿರುವ ಎಂ.ಸಿ. ಮೆಹ್ತಾ ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಬಹುಮಹಡಿ ಕಟ್ಟಡ ಕಾನೂನು ಬಾಹಿರವಾಗಿದ್ದು, ಪಾರಂಪರಿಕ ತಾಣಕ್ಕೆ ಧಕ್ಕೆಯುಂಟಾಗುತ್ತದೆ. ಅಲ್ಲದೆ ಇದು ಮಹಲಿನಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಈ ಕಾರಣದಿಂದಾಗಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿದ್ದರು.

ನವದೆಹಲಿ(ಅ.24): ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ವಿವಾದ ಪಡೆದುಕೊಳ್ಳುತ್ತಿರುವ ವಿಶ್ವಖ್ಯಾತಿ ಪಾರಂಪರಿಕ ತಾಣ ತಾಜ್ ಮಹಲ್'ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಪಾರಂಪರಿಕ ತಾಣದ ಸುತ್ತಲಿರುವ ಬಹುಸಂಕೀರ್ಣದ ಪಾರ್ಕಿಂಗ್ ಪ್ರದೇಶವನ್ನು ಕೆಡವಬೇಕೆಂದು ಸೂಚಿಸಿದೆ. ಪಾರ್ಕಿಂಗ್ ಕಟ್ಟಗಳ ಕಾರಣದಿಂದ ಪರಿಸರ ಮಾಲಿನ್ಯ ಉಂಟಾಗಿ ಕಟ್ಟಡದ ವಾಸ್ತುಶಿಲ್ಪಕ್ಕೆ ಅಪಾಯವಾಗುವ ಕಾರಣದಿಂದ ಕೆಡವಬೇಕೆಂದು ಆದೇಶದಲ್ಲಿ ತಿಳಿಸಿದೆ.

Latest Videos

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತಾಜ್ ಮಹಲ್ ಸುತ್ತಮುತ್ತ ಸಂಚಾರಿ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಮಹಲಿನ ಪೂರ್ವ ಗೇಟಿನ ಬಳಿ ನೆಲಮಾಳಿಗೆಯು ಹೊಂದಿಕೊಂಡಂತೆ ಬಹುಸಂಕೀರ್ಣ ಪಾರ್ಕಿಂಗ್ ಸ್ಥಳ ನಿರ್ಮಿಸಲು ಹೊರಟಿದೆ, ಜೊತೆಗೆ ನಿರ್ಮಾಣ ಕಾರ್ಯವು ನಡೆಯುತ್ತದೆ.

ಕಾನೂನು ಬಾಹಿರ ಹಾಗೂ ಮಹಲಿಗೆ ಧಕ್ಕೆ

ಪರಿಸರವಾದಿ ಹಾಗೂ ವಕೀಲರು ಆಗಿರುವ ಎಂ.ಸಿ. ಮೆಹ್ತಾ ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಬಹುಮಹಡಿ ಕಟ್ಟಡ ಕಾನೂನು ಬಾಹಿರವಾಗಿದ್ದು, ಪಾರಂಪರಿಕ ತಾಣಕ್ಕೆ ಧಕ್ಕೆಯುಂಟಾಗುತ್ತದೆ. ಅಲ್ಲದೆ ಇದು ಮಹಲಿನಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಈ ಕಾರಣದಿಂದಾಗಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟ್'ಗೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯನ್ನು ಆಲಿಸಿದ  ಮದನ್ ಬಿ ಲಾಕೂರ್ ಹಾಗೂ ದೀಪಕ್ ಗುಪ್ತ ನೇತೃತ್ವದ ಪೀಠ 4 ವಾರಗಳಲ್ಲಿ ನಿರ್ಮಿಸ ಹೊರಟಿರುವ ಕಟ್ಟಡವನ್ನು ಕೆಡವಲು ಸೂಚಿಸಿದೆ. ಯೋಗಿ ಆದಿತ್ಯನಾಥ್ ಸರ್ಕಾರ 231 ಕೋಟಿ ರೂ. ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಹೊರಟಿತ್ತು. ವಿಶ್ವದ ಇತರ ಅದ್ಭುತಗಳಲ್ಲಿ ಒಂದಾಗಿರುವ ತಾಜ್'ಮಹಲ್ 1983ರಲ್ಲಿ ಯುನೆಸ್ಕೋ'ದಿಂದ  ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸ್ಪಟ್ಟಿತ್ತು. ಅಂದಿನಿಂದ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ.

click me!