ಗಮನಿಸಿ...ಪಟಾಕಿ ಸುಡುವ ಸಮಯ ವಿಸ್ತರಣೆಯಾಗಿದೆ

By Web DeskFirst Published Oct 30, 2018, 2:56 PM IST
Highlights

ಇಷ್ಟು ದಿನ ಮನಸೋ ಇಚ್ಛೆ ಯಾವಾಗ ಬೇಕಾದರಾವಾಗ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದವರಿಗೆ ಸುಪ್ರೀಂಕೋರ್ಟ್‌ ಆದೇಶ ಶಾಕ್‌ ನೀಡಿತ್ತು. ಪಟಾಕಿ ಸುಡುವುದರ ಮೇಲೆ ಒಂದಿಷ್ಟು ನಿರ್ಬಂಧ ಹೇರಿತ್ತು. ಆದರೆ ಈಗ ಮತ್ತೊಂದು ಆದೇಶ ನೀಡಿದ್ದು ಒಂದು ರಾಜ್ಯಕ್ಕೆ ಸಂಬಂಧಿಸಿ  ಆದೇಶ ನೀಡಿದೆ.

ನವದೆಹಲಿ(ಅ.30)  ದೀಪಾವಳಿ ಹತ್ತಿರವಾಗುತ್ತಿದ್ದು ದೀಪಗಳ ಹಬ್ಬ ದೀಪಾವಳೀ ಪಟಾಕಿ ಹಬ್ಬವಾಗಿ ವರ್ಷಗಳೆ ಕಳೆದಿವೆ. ನಿರಂತರವಾಗಿ ಪಟಾಕಿ ಸುಡುವುದು ಪರಿಸರ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಮನಗಂಡಿದ್ದ ಸುಪ್ರೀಂ ಕೋರ್ಟ್ ಪಟಾಕಿ ಸುಡುವುದಕ್ಕೆ ಸಮಯ ನಿಗದಿ ಮಾಡಿತ್ತು.

ಆದರೆ ಇದೀಗ ತಮಿಳುನಾಡು ಸರ್ಕಾರದ ಮನವಿಯನ್ನು ಪರಿಗಣಿಸಿ ರಾಜ್ಯದಲ್ಲಿ ಪಟಾಕಿ ಸಿಡುವ ಸಮಯವನ್ನು ವಿಸ್ತರಣೆ ಮಾಡಿದೆ. ಹಬ್ಬದ ಸಂಭ್ರಮದ ವೇಳೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬೇಕೆಂದು ನಿಬಂಧನೆಯನ್ನೂ ವಿಧಿಸಿತ್ತು. 

ತಮಿಳುನಾಡಿನ ಮನವಿಗೆ ಮನ್ನಣೆ ನೀಡಲಾಗಿದ್ದು ದೀಪಾವಳಿ ಹಬ್ಬದ ದಿನದಂದು 4.30ರಿಂದ 6.30ರವರೆಗೂ ಪಟಾಕಿ ಸಿಡಿಸಲು ಅವಕಾಶ ಮಾಡಿಕೊಟ್ಟಿದೆ.


 

 

click me!