ಧೋವಲ್ ಮಾತು ಕೇಳಿ ವರ್ಮಾ ನೇಮಿಸಿದ್ರಾ ಮೋದಿ?

By Web DeskFirst Published Oct 30, 2018, 2:12 PM IST
Highlights

2016 ರಲ್ಲಿ ಸಿಬಿಐ ನಿರ್ದೇಶಕರ ನೇಮಕ ಮಾಡುವಾಗ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಈಗಿನ ನಿರ್ದೇಶಕ ಅಲೋಕ್ ವರ್ಮಾ ಹೆಸರನ್ನು ಮೋದಿ ಸಾಹೇಬರಿಗೆ ಸೂಚಿಸಿದ್ದರು. ಯಾರ ಜೊತೆ ಅನಗತ್ಯ ಜಗಳ ಕಾಯದ, ತನ್ನ ಪಾಡಿಗೆ ತಾನು ಎಂಬಂತೆ ಇರುವ ಅಲೋಕ್ ವರ್ಮಾ ಹೆಸರನ್ನು ದೋವಾಲ್ ಮುಂದಿಟ್ಟಾಗ ಮೋದಿ ಕೂಡಲೇ ಒಪ್ಪಿಕೊಂಡರಂತೆ. 

ನವದೆಹಲಿ (ಅ. 30): 2016 ರಲ್ಲಿ ಸಿಬಿಐ ನಿರ್ದೇಶಕರ ನೇಮಕ ಮಾಡುವಾಗ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಈಗಿನ ನಿರ್ದೇಶಕ ಅಲೋಕ್ ವರ್ಮಾ ಹೆಸರನ್ನು ಮೋದಿ ಸಾಹೇಬರಿಗೆ ಸೂಚಿಸಿದ್ದರು.

ಯಾರ ಜೊತೆ ಅನಗತ್ಯ ಜಗಳ ಕಾಯದ, ತನ್ನ ಪಾಡಿಗೆ ತಾನು ಎಂಬಂತೆ ಇರುವ ಅಲೋಕ್ ವರ್ಮಾ ಹೆಸರನ್ನು ದೋವಾಲ್ ಮುಂದಿಟ್ಟಾಗ ಮೋದಿ ಕೂಡಲೇ ಒಪ್ಪಿಕೊಂಡರಂತೆ. ಆದರೆ ಅಲ್ಲಿಯವರೆಗೆ ವರ್ಮಾರಿಗೆ ಸಿಬಿಐನಲ್ಲಿ ಒಮ್ಮೆಯೂ ಕೆಲಸ ಮಾಡಿದ ಅನುಭವ ಇರಲಿಲ್ಲ.

ಆದರೆ ಅದಾಗಲೇ ಸಿಬಿಐ ಹಂಗಾಮಿ ಮುಖ್ಯಸ್ಥರಾಗಿದ್ದ, ರಾಕೇಶ್ ಅಸ್ಥಾನಾ, ಪ್ರಧಾನಿಯವರ ಹೆಚ್ಚುವರಿ ಕಾರ್ಯದರ್ಶಿ ಗುಜರಾತಿ ಲಾಬಿಯ ಪಿ.ಕೆ ಮಿಶ್ರಾ, ಅನೇಕರು ಹೇಳುವ ಪ್ರಕಾರ ಗುಜರಾತಿ ಮತ್ತು ಗುಜರಾತಿಯೇತರ ಅಧಿಕಾರಿಗಳ ತಿಕ್ಕಾಟ ಜಬರ್ ದಸ್ತ್ ರೀತಿಯಲ್ಲಿ ಪ್ರಧಾನಿ ಕಾರ್ಯಾಲಯದಲ್ಲೂ ಇದೆಯಂತೆ. ಆದರೆ ಅದು ಸಿಬಿಐನಲ್ಲಿ ಹೊರ ಬಂದಿದೆ ಅಷ್ಟೇ.

ದಲ್ಲಾಳಿಯ ಆರೋಪದ ಬೆನ್ನು ಹತ್ತಿ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನಾ ಇಬ್ಬರೂ ಒಬ್ಬರಿಗೊಬ್ಬರ ಮೇಲೆ ಲಂಚದ ಆರೋಪ ಹೊರಿಸುತ್ತಿರುವುದು, ಹೈದರಾಬಾದ್‌ನ ಒಬ್ಬ ದಲ್ಲಾಳಿ ಸತೀಶ್ ಸಾನಾ ಹೇಳಿಕೆ ಮೇಲೆ. ಆಗಸ್ಟ್‌ನಲ್ಲಿ ರಾಕೇಶ್ ಅಸ್ಥಾನಾ ಸಿವಿಸಿಗೆ ಬರೆದ ಪತ್ರದಲ್ಲಿ, ಅಲೋಕ್ ವರ್ಮಾ ಕೇಸ್ ಮುಚ್ಚಿ ಹಾಕಲು ಸತೀಶ್‌ನಿಂದ ೨ ಕೋಟಿ ಹಣ ಪಡೆದಿದ್ದಾರೆ ಎಂದಿತ್ತು.

ಈಗ ಆ ಪತ್ರ ಬರೆದ 2 ತಿಂಗಳ ನಂತರ ಅಲೋಕ್ ವರ್ಮಾ, ಅದೇ ಸತೀಶ್‌ನಿಂದ ಕೇಸ್ ಮುಚ್ಚಿ ಹಾಕಲು ರಾಕೇಶ್ ಅಸ್ಥಾನಾ 5 ಕೋಟಿ ಲಂಚ ತೆಗೆದುಕೊಂಡಿದ್ದಾರೆ ಎಂದು ಎಫ್‌ಐಆರ್ ಹಾಕಿಸಿದ್ದಾರೆ. ಒಂದು ಆಶ್ಚರ್ಯ ಎಂದರೆ, ಇಬ್ಬರು ತಮ್ಮ ತಮ್ಮ ದೂರುಗಳಲ್ಲಿ ಮಾಜಿ ರಾ ಏಜೆನ್ಸಿ ಮುಖ್ಯಸ್ಥರ ಪುತ್ರ ಮನೋಜ ಪ್ರಸಾದ್ ಮೂಲಕ ಹಣ ಸಂದಾಯವಾಗಿದೆ ಎಂದು ಆರೋಪಿಸುತ್ತಿರುವುದು. ಈಗ 15 ದಿನದಲ್ಲಿ ಸಿವಿಸಿ ನಿಜಕ್ಕೂ ಹಣ ತೆಗೆದುಕೊಂಡಿದ್ದು ಯಾರು ಅಥವಾ
ಇಬ್ಬರದೂ ಕಟ್ಟು ಕಥೆಯೇ ಎಂದು ತನಿಖೆ ಮಾಡಬೇಕಿದೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 
 

click me!