‘ಕುಮಾರಸ್ವಾಮಿ ವಿರುದ್ಧಾನೂ #MeToo ಆರೋಪ ಬರುತ್ತೆ..!’

Published : Oct 30, 2018, 02:32 PM ISTUpdated : Oct 30, 2018, 02:57 PM IST
‘ಕುಮಾರಸ್ವಾಮಿ ವಿರುದ್ಧಾನೂ #MeToo ಆರೋಪ ಬರುತ್ತೆ..!’

ಸಾರಾಂಶ

ಶಿವಮೊಗ್ಗ ರಣಕಣದಲ್ಲಿ ಬೀದಿಗೆ ಬಂತು ಕುಟುಂಬ ರಾಜಕಾರಣ. ಸಿಎಂ ಕುಮಾರಸ್ವಾಮಿ ವಿರುದ್ಧ ಕೆರಳಿ ಕೆಂಡವಾದ ಕುಮಾರ್ ಬಂಗಾರಪ್ಪ ಸಿಎಂ ಕುಮಾರಸ್ವಾಮಿ ವೈಯಕ್ತಿಕ ವಿಚಾರ ಕೆದಕಿದ ಕುಮಾರ್ ಬಂಗಾರಪ್ಪ.ರಾಧಿಕಾ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದ್ದಾರೆ. ಇದರ ವಿವರ ಇಲ್ಲಿದೆ.

ಶಿವಮೊಗ್ಗ, [ಅ.30]: ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರಿಗಾದ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುವ ಮಿಟೂ ಅಭಿಯಾನ ಇದೀಗ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಕೇಳಿಬಂದಿದೆ.

ಎಷ್ಟೇ ರಾಜಕೀಯ ವೈಷಮ್ಯವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರ ಅದರಲ್ಲೂ ಅವರ ಎರಡನೇ ಪತ್ನಿ ವಿಷಯವನ್ನು ಯಾವುದೇ ಪಕ್ಷದ ನಾಯಕರು ಇದುವರೆಗೂ ತೆಗೆದಿರಲಿಲ್ಲ.

 ಅದ್ರಲ್ಲೂ ಚುನಾವಣೆ ಪ್ರಚಾರಗಳಲ್ಲಿ ಈ ವಿಷಯವನ್ನು ತೆಗೆದವರು ಯಾರೂ ಇರಲಿಲ್ಲ. ಆದ್ರೆ, ಇಂದು ಸಿಡಿದೆದ್ದಿರುವ ಕುಮಾರ್ ಬಂಗಾರಪ್ಪ, ಸಿಎಂ ಕುಮಾರಸ್ವಾಮಿ ವೈಯಕ್ತಿಕ ವಿಚಾರವನ್ನು ಕೆದಕಿದ್ದಾರೆ. 

ಶಿವಮೊಗ್ಗದಲ್ಲಿ ಬೈ ಎಲೆಕ್ಷನ್ ಪ್ರಚಾರದ ವೇಳೆ ರಾಧಿಕಾ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದ ಕುಮಾರ್ ಬಂಗಾರಪ್ಪ, ರಾಧಿಕಾ ಕುಮಾರಸ್ವಾಮಿಯನ್ನೂ ಅಭ್ಯರ್ಥಿಯನ್ನಾಗಿ ಮಾಡಲಿ. ಯಾರನ್ನು ಇಟ್ಟುಕೊಂಡಿದ್ದಾರೋ ಅವರನ್ನು ಆಭ್ಯರ್ಥಿ ಮಾಡಲಿ. 

ಕುಮಾರಸ್ವಾಮಿಗೆ ಮೀಟೂ ಪರಿಸ್ಥಿತಿ ಬರುತ್ತದೆ ಎಂದ ಕುಮಾರ್ ಬಂಗಾರಪ್ಪ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ಕೆರಳಿ ಕೆಂಡವಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ