ದೆಹಲಿ: ಈ ಬಾರಿಯೂ ದೀಪಾವಳಿ ಪಟಾಕಿಗೆ ಸುಪ್ರೀಂ ನಿಷೇಧ

By Suvarna Web DeskFirst Published Oct 9, 2017, 1:23 PM IST
Highlights

ನ.1ರವರೆಗೆ ದೆಹಲಿಯಲ್ಲಿ ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ದೀಪಾವಳಿ ಬಳಿಕ ವಾಯುವಿನ ಗುಣಮಟ್ಟದ ಮೇಲೆ ನಿಷೇಧದ ಪರಿಣಾಮವನ್ನು ಪರಿಶೀಲಿಸುವುದಾಗಿ ಅದು ಹೇಳಿದೆ.

ನವದೆಹಲಿ: ನ.1ರವರೆಗೆ ದೆಹಲಿಯಲ್ಲಿ ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದೆ. ದೀಪಾವಳಿ ಬಳಿಕ ವಾಯುವಿನ ಗುಣಮಟ್ಟದ ಮೇಲೆ ನಿಷೇಧದ ಪರಿಣಾಮವನ್ನು ಪರಿಶೀಲಿಸುವುದಾಗಿ ಅದು ಹೇಳಿದೆ.

ಕಳೆದ ಸೆ.12ರಂದು ಸುಡುಮದ್ದು ಹಾಗೂ ಪಟಾಕಿ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಸಡಿಲಿಸಿತ್ತು. ಕೇವಲ 500 ಮಾರಾಟಗಾರರಿಗೆ ಮಾತ್ರ ಪರವಾನಿಗೆಗಳನ್ನು ನೀಡುವಂತೆ ಸೂಚಿಸಿತ್ತು.

ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟದ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಕೋರಿ ಸುಡುಮದ್ದು ಮಾರಾಟಗಾರರ ಸಂಘವು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

ಪರಿಸರದ ಮೇಲೆ ಸುಡುಮದ್ದುಗಳು ಬೀರಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನವಂಬರ್’ 25ರಂದು ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟವನ್ನು ನಿಷೇಧಿಸಿತ್ತು.

click me!