ಬಡ್ತಿ ಮೀಸಲಾತಿ ಮುಂದುವರಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

First Published Jun 5, 2018, 12:43 PM IST
Highlights

ಬಡ್ತಿ ಮೀಸಲಾತಿಯಲ್ಲಿ ಬದಲಾವಣೆ ತರಲು ಹೊರಟ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸದ್ಯ ಇರೋ ನಿಯಮದ ಪ್ರಕಾರ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಕ್ಕೆ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡೋ ನಿಯಮವನ್ನ ಮುಂದುವರಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.
 

ದೆಹಲಿ(ಜೂನ್.5): ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಉದ್ಯೋಗಿಗಳಿಗೆ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡೋ ಕಾನೂನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬಡ್ತಿ ಮೀಸಲಾತಿ ಸಂವಿಧಾನದಲ್ಲಿ ಬದಲಾವಣೆಯಾಗೋ ವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಲು ಸುಪ್ರೀಂ ಸೂಚಿಸಿದೆ.

ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಉಪಯುಕ್ತವಲ್ಲ ಎಂಬ ಸರ್ಕಾರದ ವಾದಕ್ಕೆ ಸದ್ಯಕ್ಕೆ ತಡೆ ಬಿದ್ದಿದೆ. ಸದ್ಯದ ಕಾನೂನಿನ ಪ್ರಕಾರ ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡಲಾಗುತ್ತಿದೆ. ಹೀಗಾಗಿ ಸದ್ಯ ಇದನ್ನೇ ಮುಂದುವರಿಸಲು ಕೋರ್ಟ್ ಸೂಚಿಸಿದೆ.

ಬಡ್ತಿ ಮೀಸಲಾತಿಗಾಗಿ ಸದ್ಯದ ನಿಯಮ ಪಾಲಿಸಲು ಕೋರ್ಟ್ ಸೂಚಿಸಿದೆ. ಆದರೆ ಸುಪ್ರೀಂ ಕೋರ್ಟ್ ನೀಡಿರೋ ಆದೇಶದಲ್ಲಿ ಯಾವ ನಿಮಯ ಪಾಲಿಸಬೇಕೆಂಬ ಕುರಿತು ಸ್ಪಷ್ಟತೆ ಇಲ್ಲ ಎಂದು ಆಡಿಶನ್ ಸಾಲಿಸಿಟ್ ಜನರಲ್ ಮನೀಂದರ್ ಸಿಂಗ್ ಹೇಳಿದ್ದಾರೆ.

 

click me!