
ಕೊಚ್ಚಿ(ಅ.5): ದೇಶದಲ್ಲಿ ಭಯಾನಕ ಐಸಿಸ್ ಸಿದ್ದಾಂತ ಹರಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಮಧ್ಯೆ ಐಸಿಸ್ ಸಿದ್ದಾಂತಕ್ಕೆ ಬಂಬಲ ನೀಡುವುದು ದೇಶದ ವಿರುದ್ಧ ಯುದ್ಧ ಸಾರಿದಂತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ಕೇರಳದಲ್ಲಿ ಯುವಕರನ್ನು ಐಸಿಸ್ ಸಂಘಟನೆ ಸೇರುವಂತೆ ಪ್ರೇರೆಪಿಸುತ್ತಿದ್ದ ಆರೋಪದ ಮೇಲೆ ಎನ್ ಐಎ ಯಾಸೀನ್ ಮೊಹ್ಮದ್ ಜೈದ್ ಎಂಬಾಕೆಯನ್ನು ಬಂಧಿಸಿತ್ತು. ಅಲ್ಲದೇ ಎರ್ನಾಕುಲಂ ಎನ್ ಐಎ ವಿಶೇಷ ನ್ಯಾಯಾಲಯ ಯಾಸೀನ್ ಗೆ ಕಠಿಣ ಶಿಕ್ಷೆ ಕೂಡ ವಿಧಿಸಿತ್ತು.
ಆದರೆ ಯಾಸೀನ್ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಿರುವ ಕೇರಳ ಹೈಕೋರ್ಟ್, ಐಸಿಸ್ ಸಿದ್ದಾಂತಕ್ಕೆ ಬೆಂಬಲ ನೀಡುವುದು ದೇಶದ ವಿರುದ್ಧ ಯುದ್ಧ ಮಾಡಿದಂತೆ ಹೇಗಾಗುತ್ತದೆ ಎಂದು ಪ್ರಶ್ನಿಸಿದೆ. ಯಾಸೀನ್ ಜಿಹಾದಿ ಸಿದ್ದಾಂತವನ್ನು ಪ್ರಚುರಪಡಿಸುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರೂ, ಆಕೆ ದೇಶದ ವಿರುದ್ಧ ಯುದ್ಧ ಸಾರಿರುವ ಕುರಿತು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆದರೆ ಯಾಸೀನ್‌ಳನ್ನು ಐಪಿಸಿ ಸೆಕ್ಷನ್ 120 B ಅನ್ವಯ ದೋಷಿ ಎಂದು ಪರಿಗಣಿಸಿದ್ದು, ಆಕೆಗೆ ಒಂದು ವರ್ಷದ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.