ಎನ್ ಡಿಎ ಒಕ್ಕೂಟಕ್ಕೆ ಸೇರುತ್ತಾ ಮತ್ತೊಂದು ಪಕ್ಷ..?

By Web DeskFirst Published Oct 5, 2018, 12:46 PM IST
Highlights

ಲೋಕಸಭಾ ಚುನಾವಣೆಗೆ  ಹಲವು ಸಿದ್ಧತೆಗಳು ನಡೆಯುತ್ತಿದ್ದು ಇದೇ ವೇಳೆ ತೆಲಂಗಾಣ ಮುಖಂಡ ಕೆ.ಟಿ.ರಾಮ ರಾವ್ ಬಿಜೆಪಿಯೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಾರೆ. 

ಹೈದ್ರಾಬಾದ್ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ವಿವಿಧ ಪಕ್ಷಗಳು ಸಿದ್ಧತೆ  ನಡೆಸಿಕೊಳ್ಳುತ್ತಿವೆ. 

ಇದೇ ವೇಳೆ ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡ ಹಾಗೂ ಕೆ ಟಿ ರಾಮರಾವ್ ಅವರು ಮುಂದಿನ  ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೇ ನಮಗೂ ಅವರಿಗೂ ಯಾವುದೇ ರೀತಿಯಾದ ಹೊಂದಾಣಿಕೆ ಸಾಧ್ಯವೇ ಇಲ್ಲ. ಯಾಕೆಂದರೆ ನಮ್ಮ ಚಿಂತನೆಗಳೇ ಬೇರೆ. ಅವರ ಚಿಂತನೆಗಳೇ ಬೇರೆ ಎಂದು ಹೇಳಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ರಾಮ್ ರಾವ್ ಅವರು ಮಾತನಾಡುತ್ತಾ ಟಿಆರ್ ಎಸ್ ಪಕ್ಷವು ಜಾತ್ಯಾತೀತ ನಿಲುವುಗಳನ್ನು ಹೊಂದಿದೆ. 

ಸಮಾಜವನ್ನು ಎಂದಿಗೂ ನಾವು ಜಾತಿಯಿಂದ ನೋಡುವುದಿಲ್ಲ. ಜಾತಿಯ ಮೂಲಕ ಸಮಾಜದಲ್ಲಿ ಭಿನ್ನತೆಯನ್ನು ಹುಡುಕುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ನಮ್ಮ ಪ್ರಣಾಳಿಕೆ ಎನ್ನುವುದು ಎಲ್ಲಾ ವರ್ಗದ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು ರಚನೆ  ಮಾಡಲಾಗಿತ್ತದೆ.

click me!