ಹುಣ್ಣಿಮೆ ಚಂದಿರ ಇಂದು ದೊಡ್ಡದಾಗಿ ಕಾಣ್ತಾನೆ

By Suvarna Web DeskFirst Published Dec 3, 2017, 11:42 AM IST
Highlights

ಭಾನುವಾರ ಹುಣ್ಣಿಮೆಯ ಚಂದಿರ ಇನ್ನಷ್ಟು ಸೂಪರ್ ಆಗಿ ಕಾಣಿಸಲಿದ್ದಾನೆ. ಈ ವರ್ಷ ಇಷ್ಟು ದೊಡ್ಡ ಹುಣ್ಣಿಮೆಯ ಚಂದಿರ ಕಂಡಿಲ್ಲ. ಎಲ್ಲಾ ಹುಣ್ಣಿಮೆಯಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ.

ಉಡುಪಿ: ಭಾನುವಾರ ಹುಣ್ಣಿಮೆಯ ಚಂದಿರ ಇನ್ನಷ್ಟು ಸೂಪರ್ ಆಗಿ ಕಾಣಿಸಲಿದ್ದಾನೆ. ಈ ವರ್ಷ ಇಷ್ಟು ದೊಡ್ಡ ಹುಣ್ಣಿಮೆಯ ಚಂದಿರ ಕಂಡಿಲ್ಲ. ಎಲ್ಲಾ ಹುಣ್ಣಿಮೆಯಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಕೆಲವೊಮ್ಮೆ ಸ್ವಲ್ಪ ಚಿಕ್ಕದಾಗಿ ಕಂಡರೆ, ಕೆಲವೊಮ್ಮೆ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ.

ಇದಕ್ಕೆಲ್ಲ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುವ ಪಥ. ಅದು ವೃತ್ತಾಕಾರವಲ್ಲ. ದೀರ್ಘ ವೃತ್ತಾಕಾರ. ಈ ದೀರ್ಘ ವೃತ್ತದಲ್ಲಿ ಒಮ್ಮೆ ಸಮೀಪ ದೂರ (ಪೆರಿಜೀ), ಅಂತೆಯೇ ಒಮ್ಮೆ ದೂರದ ದೂರ (ಅಪೋಜೀ) ಬರುವುದಿದೆ.

ಚಂದ್ರ-ಭೂಮಿಯ ಸರಾಸರಿ ದೂರ 384000 ಕಿ.ಮೀ. ಆದರೆ ಪೆರಿಜೀಗೆ ಬಂದಾಗ 356000 ಕಿ.ಮೀ. ಹಾಗೆಯೇ ಅಪೋಜೀ ಗೆ ಬಂದಾಗ 406000 ಕಿ.ಮೀ. ಆಗಿರುತ್ತದೆ. ಇಂದು ಚಂದ್ರ 357,892 ಕಿ.ಮೀ ದೂರದಲ್ಲಿದ್ದು ಪೆರಿಜೀಗೆ ಸಮೀಪದಲ್ಲಿದ್ದಾನೆ.

ಹಾಗಾಗಿ ಚಂದ್ರ 14 ಅಂಶ ದೊಡ್ಡದಾಗಿ ಕಂಡು 28 ಅಂಶ ಹೆಚ್ಚಿನ ಪ್ರಭೆಯಲ್ಲಿ ಕಾಣಿಸುತ್ತಾನೆ ಎಂದು ಉಡುಪಿಯ ಖಗೋಳ ವೀಕ್ಷಕರ ಸಂಘದ ಸಂಚಾಲಕ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

 

click me!