ಮುರಿದು ಬಿದ್ದ ಶಾಲೆಯಲ್ಲೇ ಮಕ್ಕಳಿಗೆ "ಶಿಕ್ಷ"ಣ

By suvarna Web DeskFirst Published Dec 3, 2017, 11:26 AM IST
Highlights

ಬೆಳಗಾವಿಯ ಜಿಲ್ಲೆ ಅಥಣಿ ತಾಲೂಕಿನ  ಶಿವನೂರು ಗ್ರಾಮದ ಶಾಲೆಯ ಮಕ್ಕಳು ಬಿಸಿಲು, ಮಳೆ ಎನ್ನದೇ ಬಯಲಲ್ಲೇ ಕುಳಿತು ಪಾಠವನ್ನು ಕೇಳುವ ಪರಿಸ್ಥಿತಿ ಇದೆ.  ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು,  ಗೋಡೆಗಳು ಬಿದ್ದು ಹೋಗಿವೆ.

ಬೆಳಗಾವಿ(ಡಿ.3): ಈ ಶಾಲಾ ಮಕ್ಕಳ  ಸ್ಥಿತಿ  ಕಂಡರೇ  ಸರಕಾರಕ್ಕೂ  ನಾಚಿಕೆಯಾಗುವಂತಿದೆ.  ಕಳೆದ  2 ವರ್ಷಗಳಿಂದ  ಬೆಳಗಾವಿಯ ಜಿಲ್ಲೆ ಅಥಣಿ ತಾಲೂಕಿನ  ಶಿವನೂರು ಗ್ರಾಮದ ಶಾಲೆಯ ಮಕ್ಕಳು ಬಿಸಿಲು, ಮಳೆ ಎನ್ನದೇ ಬಯಲಲ್ಲೇ ಕುಳಿತು ಪಾಠವನ್ನು ಕೇಳುವ ಪರಿಸ್ಥಿತಿ ಇದೆ.  ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು,  ಗೋಡೆಗಳು ಬಿದ್ದು ಹೋಗಿವೆ.

ರಾಜ್ಯದ ಗಡಿ ಪ್ರದೇಶದಲ್ಲಿ ರುವ ಈ ಗ್ರಾಮದ ಶಾಲೆಯ ಕಟ್ಟಡದ  ಎಲ್ಲಾ ಗೋಡೆಗಳೂ ಕೂಡ ಬಿದ್ದು ಹೋಗಿವೆ. ಇನ್ನು ಕೆಲವು ಗೋಡೆಗಳು ಆಗಲೋ ಈಗಲೋ ಎನ್ನುವಂತಹ ಸ್ಥಿತಿಯಲ್ಲಿವೆ. ಇಂತಹ ಸ್ಥಿತಿಯಲ್ಲಿಯೇ ಗ್ರಾಮದ ಮಕ್ಕಳಲ್ಲಿ ಶಿಕ್ಷಣವನ್ನು ಪೂರೈಸುವ ಚಲವಿದ್ದು, ಬಯಲಲ್ಲಿ ಕುಳಿತೇ ಪಾಠ ಕೇಳುತ್ತಾರೆ.  ಇನ್ನೂ ಜೋರಾಗಿ ಮಳೆ ಬಂದರಂತೂ ಶಾಲೆಗೆ ರಜೆ ಘೋಷಿಸಲಾಗುತ್ತದೆ.

ಶಾಲೆಯ  ಇಂತಹ ಸಮಸ್ಯೆಯ ಬಗ್ಗೆ  ಇಲ್ಲಿನ ಶಿಕ್ಷಕರು  ಹಿರಿಯ ಅಧಿಕಾರಿಗಳನ್ನು ಅನೇಕ ಬಾರಿ ಸಂಪರ್ಕಿಸಿದರೂ ಕೂಡ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಿ  ಮಕ್ಕಳ ಸಮಸ್ಯೆಯನ್ನು ನಿವಾರಿಸಿ ಶಾಲೆಯ ಕಟ್ಟಡವನ್ನು ರಿಪೇರಿ ಮಾಡಿಸಲು ಸಹಕಾರ ನೀಡಬೇಕು ಎಂದು ಈ ಶಾಲೆಯ ಮಕ್ಕಳು ಮನವಿ ಮಾಡಿದ್ದಾರೆ.

click me!