ಭೌಗೋಳಿಕ ಕೌತುಕ: ಇಂದು ವರ್ಷದ ದೀರ್ಘಕಾಲ ಹಗಲು ದಿನ..!

First Published Jun 21, 2018, 1:34 PM IST
Highlights

ಇಂದು ವರ್ಷದ ದೀರ್ಘಕಾಲ ಹಗಲು ದಿನ

ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ

ಯೋಗದ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ದಿನ

ನವದೆಹಲಿ(ಜೂ.21): ಇಂದು ಇಡೀ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ಇದೇ ವೇಳೆ ಇಂದು ವರ್ಷದ ದೀರ್ಘಕಾಲ ಹಗಲು ಹೊಂದಿರುವ ದಿನ ಕೂಡ ಆಗಿರುವುದು ವಿಶೆಷ.
ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತೀ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತೀ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. 

ಇಂದು ಬ್ರಿಟನ್ ನಲ್ಲಿ ಸುಧೀರ್ಘ 16 ಗಂಟೆಗಳ ಕಾಲ ಹಗಲಿರುತ್ತದೆ. ಅಲ್ಲಿ 4.52ಕ್ಕೆ ಸೂರ್ಯೋದಯವಾಗಿ ರಾತ್ರಿ 9.27ಕ್ಕೆ ಸೂರ್ಯಾಸ್ತವಾಗುತ್ತದೆ. ಇದೇ ಕಾರಣಕ್ಕೆ ಇದು ವರ್ಷದ ದೀರ್ಘಕಾಲ ಹಗಲು ದಿನವೆಂದು ಕರೆಯುತ್ತಾರೆ. ಇನ್ನು ಡಿಸೆಂಬರ್ 21 ವರ್ಷದ ಕಡಿಮೆ ಹಗಲಿನ ರಾತ್ರಿಯಾಗಿರುತ್ತದೆ. ಅಂದು ಸೂರ್ಯ ಬೆಳಗ್ಗೆ 8.4ಕ್ಕೆ ಉದಯಿಸಿ ಮಧ್ಯಾಹ್ನ 3.52ಕ್ಕೆ ಮುಳುಗುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಜೂನ್ 21 ಮತ್ತು ಯೋಗ ದಿನದ ನಂಟು:
ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಸೂರ್ಯನ ಪ್ರಖರತೆ ಬೇರೆ ಬೇರೆ ಕಾಲಕ್ಕೆ ವಿವಿಧ ಪ್ರದೇಶದಲ್ಲಿ ಬೇರೆ ರೀತಿಯದ್ದಾಗಿರುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು “ಧೀ ಶಕ್ತಿ” ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ.

ಯೋಗಾಭ್ಯಾಸ, ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕಾಣಿಕೆ. ಈಗ ವಿಶ್ವಯೋಗ ದಿನಾಚರಣೆ ಇಡೀ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ಜ್ಞಾನವನ್ನು ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ಶಿವ ಯೋಗದ ಆದಿ ಗುರು ಆದ ದಿನವೂ ಕೂಡಾ ಹೌದು. ಹೀಗಾಗಿ, ಇದೇ ದಿನ ಸೂಕ್ತ ಎಂದು ಪ್ರಧಾನಿ ಮೋದಿ ಆಯ್ಕೆ ಮಾಡಿಕೊಂಡಿದ್ದಾರೆ.

click me!