
ನವದೆಹಲಿ(ಜು.16): ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ದೆಹಲಿಯ ಪ್ರಸಿದ್ಧ ಹೋಟೆಲ್ ಲೀಲಾ ಪ್ಯಾಲೇಸ್'ನ 345ನೇ ಕೊಠಡಿಗೆ ಮೂರೂವರೆ ವರ್ಷದಿಂದ ಪೊಲೀಸರು ಬೀಗ ಜಡಿದಿದ್ದಾರೆ. ಇದರಿಂದಾಗಿ ಹೋಟೆಲ್‌ಗೆ ಬರೋಬ್ಬರಿ 50 ಲಕ್ಷ ರು. ನಷ್ಟವಾಗಿದೆ. ಜತೆಗೆ ಹೋಟೆಲ್ ಬಾಗಿಲನ್ನು ಅಂದಿನಿಂದಲೂ ಮುಚ್ಚಿರುವುದರಿಂದಾಗಿ ತಿಗಣೆ, ಗೆದ್ದಲು ಹಾಗೂ ಇನ್ನಿತರೆ ಕ್ರಿಮಿಗಳು ಕೋಣೆ ಸೇರಿಕೊಂಡಿವೆ. ಅವು ಅಕ್ಕ-ಪಕ್ಕದ ಕೋಣೆಗೂ ಹಬ್ಬಲಾರಂಭಿಸಿವೆ.
ಹೋಟೆಲ್'ನ ಆಡಳಿತ ವರ್ಗ ಎಷ್ಟೇ ಮೊರೆ ಇಟ್ಟರೂ ಪೊಲೀಸರು ಬೀಗ ತೆರೆಯಲು ಒಪ್ಪುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿ ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದೆ. ಪ್ರಕರಣವನ್ನು ಭೇದಿಸಲು ಇನ್ನೂ ಆಗಿಲ್ಲ. ಅಪರಾಧ ನಡೆದ ಸ್ಥಳ ಮೂಲ ಸ್ಥಿತಿಯಲ್ಲೇ ಇದ್ದರೆ ವಿಧಿವಿಜ್ಞಾನ ಪರೀಕ್ಷೆಗೆ ಅನುಕೂಲ. ಹೀಗಾಗಿ ತಮಗೆ ಇನ್ನಷ್ಟು ಸಮಯ ಬೇಕು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಲೀಲಾ ಪ್ಯಾಲೇಸ್ ಹೋಟೆಲ್'ನಲ್ಲಿ ಗಣ್ಯಾತಿಗಣ್ಯ ವ್ಯಕ್ತಿಗಳ ವಾಸ್ತವ್ಯಕ್ಕೆ 17 ಸೂಟ್‌ಗಳು ಇದ್ದು, ಒಂದು ರಾತ್ರಿಗೆ 55 ಸಾವಿರ ರೂ. ನಿಂದ 61 ಸಾವಿರ ರೂ. ಬಾಡಿಗೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.