ದೇವದಾಸಿಯರಿಂದ ಚಪ್ಪಲಿ ಏಟು ತಿಂದಿದ್ದೆ: ಸುಧಾಮೂರ್ತಿ

By Suvarna Web DeskFirst Published Mar 23, 2018, 8:42 AM IST
Highlights

ನಗರದ ಬಿವಿಬಿ ಕಾಲೇಜಿನಲ್ಲಿ ನಡೆದ ‘ಹೌ ಟು ಬೀಟ್‌ ಬಾಯ್ಸ್’ ಎಂಬ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ದೇವದಾಸಿಯರನ್ನು ಪುನಃಶ್ಚೇತನ ಕೇಂದ್ರಕ್ಕೆ ಕರೆತಂದು ಅವರ ಜೀವನ ಬದಲಾಯಿಸಲು ಹೋದಾಗ, ಮೊದಲು ಅವರು ನನಗೆ ಚಪ್ಪಲಿಯಿಂದ ಹೊಡೆದಿದ್ದರು. ಎರಡನೇ ಬಾರಿ ಹೋದಾಗ ಟೊಮೆಟೋದಲ್ಲಿ ಹೊಡೆದಿದ್ದರು. ದೇವದಾಸಿಯರಲ್ಲಿ ನೂರು ಮಂದಿಯನ್ನು ಪರಿವರ್ತಿಸಲು ಹೋದರೆ ಮೂವರನ್ನು ಮಾತ್ರ ಪರಿವರ್ತಿಸಲು ಸಾಧ್ಯ. ಅಂತಹದ್ದರಲ್ಲಿ ಕಳೆದ 18 ವರ್ಷಗಳಲ್ಲಿ 3000 ದೇವದಾಸಿಯರ ಮನ ಪರಿವರ್ತನೆ ಮಾಡಿದ್ದೇವೆ ಎಂದರು.

ಹುಬ್ಬಳ್ಳಿ(ಮಾ.23): ದೇವದಾಸಿಯರಿಗೆ ಸಹಾಯ ಮಾಡಲು ಹೋದಾಗ ಅನುಭವಿಸಿದ ಯಾತನೆ ನನ್ನ ಜೀವನದಲ್ಲೇ ಎದುರಾದ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು ಎಂದು ಇಸ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ತಿಳಿಸಿದರು.

ನಗರದ ಬಿವಿಬಿ ಕಾಲೇಜಿನಲ್ಲಿ ನಡೆದ ‘ಹೌ ಟು ಬೀಟ್‌ ಬಾಯ್ಸ್’ ಎಂಬ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ದೇವದಾಸಿಯರನ್ನು ಪುನಃಶ್ಚೇತನ ಕೇಂದ್ರಕ್ಕೆ ಕರೆತಂದು ಅವರ ಜೀವನ ಬದಲಾಯಿಸಲು ಹೋದಾಗ, ಮೊದಲು ಅವರು ನನಗೆ ಚಪ್ಪಲಿಯಿಂದ ಹೊಡೆದಿದ್ದರು. ಎರಡನೇ ಬಾರಿ ಹೋದಾಗ ಟೊಮೆಟೋದಲ್ಲಿ ಹೊಡೆದಿದ್ದರು. ದೇವದಾಸಿಯರಲ್ಲಿ ನೂರು ಮಂದಿಯನ್ನು ಪರಿವರ್ತಿಸಲು ಹೋದರೆ ಮೂವರನ್ನು ಮಾತ್ರ ಪರಿವರ್ತಿಸಲು ಸಾಧ್ಯ. ಅಂತಹದ್ದರಲ್ಲಿ ಕಳೆದ 18 ವರ್ಷಗಳಲ್ಲಿ 3000 ದೇವದಾಸಿಯರ ಮನ ಪರಿವರ್ತನೆ ಮಾಡಿದ್ದೇವೆ ಎಂದರು.

ಇಸ್ಫೋಸಿಸ್‌ ಸಂಸ್ಥೆಯ ಆದಾಯ ಹೆಚ್ಚಳ, ಲಾಭಾಂಶ ದುಪ್ಪಟ್ಟು ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನನ್ನ ಮಕ್ಕಳು ಹಣ ಕೇಳಿದಾಗ, ಇಲ್ಲ ಎಂದು ಹೇಳಲು ಸಾಧ್ಯವಿರಲಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡುವುದು ನನಗೆ ಇಷ್ಟವಿರಲಿಲ್ಲ. ಜೀವನದಲ್ಲಿ ಇದಕ್ಕಿಂತ ಕಠಿಣ ಸಮಸ್ಯೆಗಳನ್ನು ನಾನು ಎದುರಿಸಿಯೇ ಇಲ್ಲ ಎಂದು ಹೇಳಿದರು.

click me!