ದರ್ಶನ್ ವಿವಾದ: ಫುಲ್'ಸ್ಟಾಪ್'ನಷ್ಟೂ ಪ್ರತಿಕ್ರಿಯೆ ಕೊಡಲ್ಲ ಎಂದ ಸುದೀಪ್

Published : Mar 07, 2017, 05:15 AM ISTUpdated : Apr 11, 2018, 12:47 PM IST
ದರ್ಶನ್ ವಿವಾದ: ಫುಲ್'ಸ್ಟಾಪ್'ನಷ್ಟೂ ಪ್ರತಿಕ್ರಿಯೆ ಕೊಡಲ್ಲ ಎಂದ ಸುದೀಪ್

ಸಾರಾಂಶ

ಸೋಮವಾರ ಹೆಬ್ಬುಲಿ ಚಿತ್ರದ ಪ್ರಚಾರ ಯಾತ್ರೆ​ಯಲ್ಲಿ ಪಾಲ್ಗೊಂಡಿದ್ದ ಸುದೀಪ್‌, ಪತ್ರಕರ್ತ​ರೊಂದಿಗೆ ಈ ವಿಚಾರವಾಗಿ ಮಾತಾ​ಡಲು ನಿರಾ​ಕರಿಸಿದರು. ದರ್ಶನ್‌ ಅವರ ಜೊತೆಗಿನ ಸಂಬಂಧದ ಕುರಿತು ತಮಗೆ ಹೇಳುವು​ದಕ್ಕೇನೂ ಇಲ್ಲ. ಒಂದು ಫುಲ್‌ಸ್ಟಾಪ್‌ನಷ್ಟೂಪ್ರತಿ​ಕ್ರಿಯೆ ನೀಡಲ್ಲ. ನಾವು ಇದನ್ನೆಲ್ಲ ಮೀರಿ ಮುಂದು​ವರಿ​​ಯಬೇಕು ಎಂದು ಸುದೀಪ್‌ ಆತ್ಮೀಯರಲ್ಲಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ತುಮಕೂರಿನಲ್ಲೂ ಪತ್ರಕರ್ತರು ಈ ಬಗ್ಗೆ ಪ್ರತಿಕ್ರಿಯೆ ಸುದೀಪ್‌ ಅವರನ್ನು ಕೇಳಿದಾಗ ನೋ ಕಮೆಂಟ್ಸ್‌ ಎಂದರು.

ಬೆಂಗಳೂರು(ಮಾ.07): ನಮ್ಮಿಬ್ಬರ ಸ್ನೇಹ ಮುರಿದು ಬಿದ್ದಿದೆ. ಇನ್ನು ಮೇಲೆ ನಾನು ಮತ್ತು ಸುದೀಪ್‌ ಗೆಳೆಯರಲ್ಲ ಎಂಬ ದರ್ಶನ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಲು ಸುದೀಪ್‌ ನಿರಾಕರಿಸಿ​ದ್ದಾರೆ.

ಸೋಮವಾರ ಹೆಬ್ಬುಲಿ ಚಿತ್ರದ ಪ್ರಚಾರ ಯಾತ್ರೆ​ಯಲ್ಲಿ ಪಾಲ್ಗೊಂಡಿದ್ದ ಸುದೀಪ್‌, ಪತ್ರಕರ್ತ​ರೊಂದಿಗೆ ಈ ವಿಚಾರವಾಗಿ ಮಾತಾ​ಡಲು ನಿರಾ​ಕರಿಸಿದರು. ದರ್ಶನ್‌ ಅವರ ಜೊತೆಗಿನ ಸಂಬಂಧದ ಕುರಿತು ತಮಗೆ ಹೇಳುವು​ದಕ್ಕೇನೂ ಇಲ್ಲ. ಒಂದು ಫುಲ್‌ಸ್ಟಾಪ್‌ನಷ್ಟೂಪ್ರತಿ​ಕ್ರಿಯೆ ನೀಡಲ್ಲ. ನಾವು ಇದನ್ನೆಲ್ಲ ಮೀರಿ ಮುಂದು​ವರಿ​​ಯಬೇಕು ಎಂದು ಸುದೀಪ್‌ ಆತ್ಮೀಯರಲ್ಲಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ತುಮಕೂರಿನಲ್ಲೂ ಪತ್ರಕರ್ತರು ಈ ಬಗ್ಗೆ ಪ್ರತಿಕ್ರಿಯೆ ಸುದೀಪ್‌ ಅವರನ್ನು ಕೇಳಿದಾಗ ನೋ ಕಮೆಂಟ್ಸ್‌ ಎಂದರು.

ಈ ಮಧ್ಯೆ ದರ್ಶನ್‌ರ ಮೊದಲ ಚಿತ್ರವಾದ ‘ಮೆಜೆಸ್ಟಿಕ್‌'ನ ನಿರ್ದೇಶಕ ಪಿ.ಎನ್‌.ಸತ್ಯ, ಮೆಜೆ​ಸ್ಟಿಕ್‌ ಚಿತ್ರದ ನಾಯಕನ ಪಾತ್ರಕ್ಕೆ ದರ್ಶನ್‌ ಅಲ್ಲದೇ ಮತ್ಯಾ​ರನ್ನೂ ತಾವು ಸಂಪರ್ಕಿಸಿರಲಿಲ್ಲ. ದರ್ಶನ್‌ ಅವರಿ​ಗಿಂತ ಒಳ್ಳೆಯ ಆಯ್ಕೆ ಬೇರೆ ಯಾರೂ ಇರಲು ಸಾಧ್ಯವಿರಲಿಲ್ಲ. ನಮಗೆ ದರ್ಶನ್‌ ಹೆಸ​ರನ್ನು ಸೂಚಿಸಿದವರು ಛಾಯಾ​ಗ್ರಾಹಕ ಅಣಜಿ ನಾಗ​ರಾಜ್‌ ಎಂದು ಹೇಳಿದ್ದಾರೆ. ಮೆಜೆ​ಸ್ಟಿಕ್‌ ಚಿತ್ರದ ನಿರ್ಮಾಪಕ ರಾಮಮೂರ್ತಿ ಅವರೂ ಸತ್ಯ ಅವರ ಹೇಳಿಕೆಯನ್ನು ಸಮರ್ಥಿಸಿ​ಕೊಂಡಿದ್ದಾರೆ. 
ಆದರೆ ನಿರ್ಮಾಪಕ ಬಾ.ಮ. ಹರೀಶ್‌ ಅವರು ದರ್ಶನ್‌ರನ್ನು ಮೆಜೆಸ್ಟಿಕ್‌ ಸಿನಿಮಾಕ್ಕೆ ಸೂಚಿಸಿದ್ದೇ ಸುದೀಪ್‌. ಈ ಚಿತ್ರಕ್ಕೆ ಹೀರೋ ಆಗುವಂತೆ ಮೊದಲು ಸುದೀಪ್‌ರನ್ನು ಕೇಳಲಾಗಿತ್ತು. ಅವರು ಈ ಪಾತ್ರಕ್ಕೆ ತೂಗುದೀಪ್‌ ಶ್ರೀನಿವಾಸ್‌ ಅವರ ಮಗ ದರ್ಶನ್‌ರನ್ನು ಹಾಕಿಕೊಳ್ಳಿ ಎಂದು ಹೇಳಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ.

ಈ ನಡುವೆ ಅವರಿಬ್ಬರ ಸ್ನೇಹ ಮತ್ತೆ ಮೊದಲಿನಂತೆ ಮುಂದುವರಿಯಲಿ ಎಂಬ ನಿಟ್ಟಿನಲ್ಲಿ ದರ್ಶನ್‌ ಮತ್ತು ಸುದೀಪ್‌ ಅಭಿ​ಮಾನಿ​ಗಳು ಸಾಮಾಜಿಕ ಜಾಲ​ತಾಣ​ಗಳಲ್ಲಿ ಒತ್ತಾಯ ಆರಂಭಿಸಿದ್ದಾರೆ. ಇಬ್ಬರು ನಟರಿಗೂ ಮತ್ತೆ ಒಂದಾಗುವಂತೆ ಸಂದೇಶ​ಗಳನ್ನು ಹರಿಬಿಟ್ಟಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಅನೇಕರು ಅವರಿಬ್ಬರ ಸಂಬಂಧವನ್ನು ಸರಿಪಡಿಸು​ವಂತೆ ಹಿರಿಯರ ಬಳಿ ಅಹವಾಲು ಇಟ್ಟಿದ್ದಾರೆ.

ಹಿರಿಯ ನಟ ಜಗ್ಗೇಶ್‌ ಅವರು ಅಭಿಮಾನಿ​ಯೊಬ್ಬರ ಪ್ರಶ್ನೆಗೆ ಉತ್ತರವಾಗಿ, ಇಬ್ಬರೂ ಕನ್ನಡದ ಕಣ್ಮಣಿಗಳು. ಸರಿಹೋಗುತ್ತಾರೆ ಎಂದು ಪ್ರತಿಕ್ರಿಯಿಸಿ​ದ್ದಾರೆ. ನಟ ಆದಿತ್ಯ ಈ ಘಟನೆಯಲ್ಲಿ ದರ್ಶನ್‌ ಹೆಸರು ಹೇಳಿಕೊಂಡು ವೈಯಕ್ತಿಕ ಲಾಭ ಮಾಡಿಕೊಳ್ಳಲು ಹೋಗಬೇಡಿ. ದರ್ಶನ್‌ ಶ್ರಮಕ್ಕೆ ಗೌರವ ಕೊಡಿ ಎಂದು ಟ್ವೀಟಿಸಿದ್ದಾರೆ.

ವರದಿ: ಕನ್ನಡ ಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ
ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!