
ಕಿಚ್ಚ ಸುದೀಪ್'ನ ಹೆಬ್ಬುಲಿ ದೇಶದಾದ್ಯಂತ ಅಬ್ಬರಿಸುತ್ತದೆ. ತೆಲುಗು, ತಮಿಳು ಚಿತ್ರಗಳಲ್ಲಿ ಉಂಟಾಗುತ್ತಿದ್ದ ಕ್ರೇಜನ್ನು ಹೆಬ್ಬುಲಿ ನಿರ್ಮಿಸಿದೆ. 450 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ 3 ದಿನಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಈಗಾಗಲೇ 25 ಕೋಟಿ ರೂ. ಬಾಚಿದೆ.
ಸಿನಿಮಾದಲ್ಲಿ ಅಭಿಮಾನಿಗಳಿಗೆ ಇಷ್ಟವಾಗುವ ಸುದೀಪ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಮಾನ್ಯ ಜನರಿಗೆ ಮತ್ತಷ್ಟು ಹತ್ತಿರವಾಗುವುದಕ್ಕೆ ಇಲ್ಲೊಂದು ಸಣ್ಣ ಉದಾಹರಣೆಯಿದೆ. ತಮ್ಮನ್ನು, ತಮ್ಮ ಚಿತ್ರಗಳನ್ನು ಟೀಕಿಸುವವರಿಗೆ ಅವರು ಸ್ನೇಹ ಪೂರ್ವಕವಾಗಿಯೇ ಉತ್ತರ ಕೊಟ್ಟಿದ್ದಾರೆ.
ಬಹುಶಃ ಕಿಚ್ಚನ ಈ ಉತ್ತರವನ್ನು ನೋಡಿದವರು ಟೀಕಿಸುವ ಬದಲು ಇನ್ನಷ್ಟು ಪ್ರೀತಿಸಲು ಶುರು ಮಾಡುತ್ತಾರೆ. ಅದೇನಂತೀರಾ.ಹೆಬ್ಬುಲಿಯನ್ನು ಬಹುತೇಕರು ಮೆಚ್ಚುಕೊಂಡಿದ್ದರೂ ಕೆಲವರಿಗೆ ಇಷ್ಟವಾಗಿರಲಿಲ್ಲ. ಅವರು ಸಿನಿಮಾ ಚೆನ್ನಾಗಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಟ್ವಿಟ್ಟರ್'ನಲ್ಲಿ ಉತ್ತರ ನೀಡಿದ ಸುದೀಪ್ 'ಹೆಬ್ಬುಲಿ ಇಷ್ಟವಾಗದಿದ್ದವರು ಬೇಸರಕೊಳ್ಳುವ ಅಗತ್ಯವಿಲ್ಲ.ಮುಂದೆ ಇದಕ್ಕಿಂತ ಉತ್ತಮ ಚಿತ್ರ ನೀಡುವುದಕ್ಕೆ ಪ್ರಯತ್ನಿಸುತ್ತೇನೆ. ನನ್ನ ಅಭಿಮಾನಿಗಳ ಜೊತೆ ಟೀಕೆಗಳನ್ನು ಇಷ್ಟಪಡುತ್ತೇನೆ, ಸದಾ ಇವುಗಳನ್ನು ಸ್ವಾಗತಿಸುತ್ತೇನೆ, ಧನ್ಯವಾದಗಳು.
ಇಂತಹ ಅಪರೂಪದ ಸಂದೇಶವನ್ನು ಮತ್ತೊಬ್ಬರು ನೀಡುವುದು ತೀರ ಕಡಿಮೆ. ಆದ ಕಾರಣಕ್ಕೆ ಇವರು ಎಲ್ಲರಿಗೂ ಇಷ್ಟವಾಗುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.