
ಬೆಂಗಳೂರು(ಫೆ.26): ಸುವರ್ಣ ನ್ಯೂಸ್'ನಲ್ಲಿ ಹಲೋ ಮಿನಿಸ್ಟರ್ ಎಂಬ ನೂತನ ನೇರಪ್ರಸಾರ ಕಾರ್ಯಕ್ರಮ ಆರಂಭವಾಗಿದ್ದು, ಈ ವಾರದ ಅತಿಥಿಯಾಗಿ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್. ಕೆ ಪಾಟೀಲ್ ಆಗಮಿಸಿದ್ದರು. ಈ ಸಂದರ್ಶನವನ್ನು ಫೇಸ್'ಬುಕ್'ನ ಲೈವ್ ಚಾಟ್'ನಲ್ಲೂ ಪ್ರಸಾರ ಮಾಡಲಾಗಿತ್ತು. ಸಂದರ್ಶನಾ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಜನರು ತಮ್ಮ ಸಮಸ್ಯೆಗಳನ್ನು ಕರೆ ಹಾಗೂ ಕಮೆಂಟ್ ಮೂಲಕ ಕಳುಹಿಸಿದ್ದರು. ಇವರೆಲ್ಲರ ಸಮಸ್ಯೆಯನ್ನು ಆಲಿಸಿದ ಸಚಿವರು ಇವೆಲ್ಲಕ್ಕೂ ಪರಿಹಾರ ಕಲ್ಪಿಸುವುದಾಗಿ ಸುವರ್ಣ ನ್ಯೂಸ್ ಮೂಲಕ ಭರವಸೆ ನೀಡಿದ್ದಾರೆ. ಆದರೆ ಲೈವ್ ಚಾಟ್ ನಡೆಸುತ್ತಿದ್ದಾಗ ವಿಶೇಷ ವ್ಯಕ್ತಿಯಿಂದ ಸಚಿವರಿಗೆ ಸರ್ಪ್ರೈಜ್ ಕರೆಯೊಂದು ಬಂದಿತ್ತು. ಆ ವಿಶೇಷ ವ್ಯಕ್ತಿ ಬೇರ್ಯಾರೂ ಆಗಿರದೆ ಸಚಿವರ ಪತ್ನಿ ಹೇಮಾ ಪಾಟೀಲ್ ಅವರದ್ದಾಗಿತ್ತು. ಈ ಲೈವ್'ಚಾಟ್'ನಲ್ಲೇ ಪತ್ನಿ ಹೇಮಾ ಸಚಿವರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಪತ್ನಿ ಹೇಮಾ ಪಾಟೀಲ್ ಮಾಡಿದ ಮನವಿ ಏನು?
ಕರೆ ಸ್ವೀಕರಿಸಿ ಮಾತನಾಡಿದ ಸಚಿವರು ಆರಂಭದಲ್ಲೇ ಪತ್ನಿಯ ಧ್ವನಿಯನ್ನು ಗುರುತಿಸಿ 'ನಿಮ್ಮ ಪ್ರಶ್ನೆ ಕೇಳಿ ಎಂದು ಹಾಸ್ಯಾಸ್ಪದವಾಗಿ ನುಡಿದಿದ್ದರು. ಇದಕ್ಕೆ ಉತ್ತರಿಸಿದ ಪತ್ನಿ ಹೇಮಾ 'ಪ್ರಶ್ನೆ ಏನೂ ಇಲ್ಲ ಆದರೆ ಸಮಯ ಪಾಲನೆ ಸರಿಯಾಗಿ ಮಾಡಿ. ಕೇವಲ ಕೆಲಸ ಒಂದು ತಲೆ ಕೆಡಿಸಿಕೊಳ್ಳಬೇಡಿ. ಆರೋಗ್ಯದ ಕಡೆಗೂ ಕೊಂಚ ಗಮನ ನೀಡಿ' ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ 'ನೀವು ನಿಮ್ಮ ಪತಿಯೊಂದಿಗೆ ನೋಡಿದ ಕೊನೆಯ ಸಿನಿಮಾ ಯಾವುದು' ಎಂದು ನಮ್ಮ ಆ್ಯಂಕರ್' ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೇಮಾ ಪಾಟೀಲ್ 'ದಂಗಲ್' ಸಿನಿಮಾ ಕೊನೆಯದಾಗಿ ನೋಡಿದ್ದು ಎಂದು ಉತ್ತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಚಿವರು 'ಇನ್ನೂ ಒಂದು ತಿಂಗಳು ಕೂಡಾ ಆಗಿಲ್ಲ, ಮೊನ್ನೆಯಷ್ಟೇ ಕರೆದೊಯ್ದಿದ್ದೀನಿ' ಎಂದು ನಕ್ಕು ಬಿಡುವುದೇ?
ಒಟ್ಟಾರೆಯಾಗಿ ಹೇಳಬೇಕೆಂದರೆ ಲೈವ್ ಚಾಟ್'ನಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆಂದ ಸಚಿವರು ಹೆಂಡತಿಯ ಮನವಿಯನ್ನು ಪಾಲಿಸುತ್ತಾರಾ ಎಂಬುವುದೇ ಕುತೂಹಲ(ಈ ಕೆಳಗೆ ನೀಡಿರುವ ವಿಡಿಯೋ ಕೊನೆಯಲ್ಲಿ ಪತ್ನಿ ಪ್ರಶ್ನೆ ಕೇಳಿದ್ದಾರೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.