
ವಿಜಯಪುರ (ಜ.03): ಜಾತಿ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಕಿಚ್ಚ ಸುದೀಪ್ ಭಾವಚಿತ್ರ ಕಂಡುಬಂದಿದೆ.
ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ ಕಚೇರಿಗೆ ಬಂದಿದ್ದ ಅರ್ಜಿಯಲ್ಲಿ ಕಿಚ್ಚ ಸುದೀಪ್ ಭಾವಚಿತ್ರ ಇರುವ ಅರ್ಜಿ ಪತ್ತೆಯಾಗಿದ್ದು ತಹಶೀಲ್ದಾರ ಬಸವರಾಜ ಭದ್ರಣ್ಣ ದಂಗಾಗಿದ್ದಾರೆ. ನಾಲತವಾಡ ಹೋಬಳಿಯ ವಿರೇಶನಗರ ನಿವಾಸಿ ಸಿದ್ದಲಿಂಗಪ್ಪ ಕೊಳೂರ ಹೆಸರಲ್ಲಿ ಅರ್ಜಿ ಬಂದಿದ್ದು ಫೋಟೋ ಮಾತ್ರ ನಟ ಸುದೀಪ್ ಅವರದ್ದಾಗಿದೆ. ಇದು ಕಿಡಿಗೇಡಿಗಳ ಕೃತ್ಯನಾ ಅಥವಾ ಉದ್ದೇಶ ಪೂರ್ವಕವಾಗಿ ಕಿಡಿಗೇಡಿ ಕೆಲಸಾನಾ ಅನ್ನೋ ಸಂಶಯ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.