
ಬೆಂಗಳೂರು (ಜ.03): ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಸುಳ್ಳು ಲೆಕ್ಕ ತೋರಿಸಿ ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಸುಳ್ಳು ಲೆಕ್ಕ ತೋರಿಸಿ ಬಡವರಿಗೆ ನೀಡುವ ಹಣವನ್ನು ನುಂಗುತ್ತಿದ್ದಾರೆ.
ಊಟ ವಿತರಣೆಗೆ ಒಂದು ಲೆಕ್ಕ ನೀಡಿದ್ದು, ದಾಖಲೆಯಲ್ಲಿ ಇನ್ನೊಂದು ರೀತಿಯಾದ ಲೆಕ್ಕ ತೋರಿಸಲಾಗಿದೆ. ಕ್ಯಾಂಟಿನ್ನಲ್ಲಿ ಒಂದು ಹೊತ್ತಿಗೆ ವಿತರಣೆ ಮಾಡೋದು ಕೇವಲ 100 ರಿಂದ 200 ಊಟವಾಗಿದ್ದರೆ. ಆದರೆ, ದಾಖಲೆಗಳಲ್ಲಿ ಮಾತ್ರ 400 ಊಟ ವಿತರಿಸಿದ್ದಾಗಿ ತೋರಿಸಲಾಗಿದೆ. ಬೆಂಗಳೂರಿನಲ್ಲಿ ಬಡವರ ಹೊಟ್ಟೆ ತುಂಬಿಸಲು ಆರಂಭವಾದ ಇಂದಿರಾ ಕ್ಯಾಂಟೀನ್ ಲೆಡ್ಜರ್ ಪುಸ್ತಕದ ಮಾಹಿತಿಯಲ್ಲಿ ಇಲ್ಲಿ ನಡೆದಿರುವ ಭ್ರಷ್ಟಾಚಾರ ಬಯಲಾಗಿದೆ.
10 ಕ್ಕೂ ಹೆಚ್ಚು ಕ್ಯಾಂಟೀನ್ ಗಳಲ್ಲಿ ನಡೆದ ಭ್ರಷ್ಟಾಚಾರದ ದಾಖಲೆ ಸುವರ್ಣ ನ್ಯೂಸ್ ಗೆ ಲಭ್ಯವಾಗಿವೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ಲೆಕ್ಕದಲ್ಲಿ ಭಾರಿ ಗೋಲ್ ಮಾಲ್ ನಡೆದಿದ್ದು, ಬಡವರ ಅನ್ನದ ಹೆಸರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಕೋಟಿ, ಕೋಟಿ ಹಣವನ್ನು ನುಂಗುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ಮೇಲ್ವಿಚಾರಣೆಗೆ ನೇಮಿಸಿದ್ದ ನೋಡಲ್ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ನಡೆದಿರುವ ಆಘಾತಕಾರಿಯಾದ ಬೆಳವಣಿಗೆಯಾಗಿದೆ.
ಈ ಅಧಿಕಾರಿಗಳು ಸಹಿ ಹಾಕಿದ ನಂತರವೇ ಕ್ಯಾಂಟೀನ್’ಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ ಅಧಿಕಾರಿಗಳ ಜೇಬಿಗೆ ಮಾತ್ರ ಕೋಟಿ ಕೋಟಿ ಸೇರುತ್ತಿದೆ. ಕಳೆದ 3 ತಿಂಗಳಿಂದ ಸದ್ದಿಲ್ಲದೇ ಇಂತಹ ಅವ್ಯವಹಾರ ನಡೆದಿದೆ. ಬಡವರ ಅನ್ನ ಕದ್ದ ಖದೀಮರ ಮುಖವಾಡವನ್ನು ಭ್ರಷ್ಟಾಚಾರದ ದಾಖಲೆಯನ್ನು ಕಾರ್ಮಿಕರ ಸಂಘದ ಅಧ್ಯಕ್ಷ ನಾಗೇಶ್ ಅವರು ಸಂಪೂರ್ಣವಾಗಿ ಕಲೆಹಾಕಿದ್ದಾರೆ. ಅಧಿಕಾರಿಗಳ ದುಡ್ಡು ಹೊಡೆಯುವ ಈ ಕಳ್ಳಾಟವನ್ನು ಇದೀಗ ಸುವರ್ಣ ನ್ಯೂಸ್ ಬಯಲು ಮಾಡಿದೆ.
ವರದಿ : ರಮೇಶ್ ಕೆ.ಎಚ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.