
ನವದೆಹಲಿ (ಜೂ.22): ಕಳಪೆ ಗುಣಮಟ್ಟ ಕಂಡು ಬಂದ ಹಿನ್ನಲೆಯಲ್ಲಿ ಬಾಬಾ ರಾಮ್ ದೇವ್'ರವರ ಪತಂಜಲಿ 6 ಮೆಡಿಕಲ್ ಉತ್ಪನ್ನಗಳನ್ನು ಕೂಡಲೇ ದೇಶದ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು ಎಂದು ನೇಪಾಳ ಆರೋಗ್ಯ ಸಚಿವಾಲಯ ಹೇಳಿದೆ.
ಉತ್ತರಖಂಡದಲ್ಲಿರುವ ದಿವ್ಯ ಫಾರ್ಮಸಿಯಲ್ಲಿ ತಯಾರಾದ 6 ಪತಂಜಲಿ ಉತ್ಪನ್ನಗಳು ಲ್ಯಾಬ್ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಕಳಪೆ ಗುಣಮಟ್ಟ ಪತ್ತೆಯಾಗಿದೆ ಎಂದು ನೇಪಾಳದ ಔಷಧಿ ಇಲಾಖೆ ಹೇಳಿದೆ. ದಿವ್ಯ ಗಶರ್ ಚೂರ್ಣ, ಬಹುಚಿ ಚೂರ್ಣ, ಆಮ್ಲ ಚೂರ್ಣ, ತ್ರಿಫಲ ಚೂರ್ಣ, ಆದ್ವಿಯ ಚೂರ್ಣ ಮತ್ತು ಅಶ್ವಂಗಂಧ- ಈ ಆರು ಉತ್ಪನ್ನಗಳನ್ನು ಕೂಡಲೇ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು ಎಂದು ನೇಪಾಳ ಆರೋಗ್ಯ ಸಚಿವಾಲಯ ಹೇಳಿದೆ. ತತ್’ಕ್ಷಣದಿಂದಲೇ ಈ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲವೆಂದು ದೇಶಾದ್ಯಂತ ಇರುವ ಎಲ್ಲಾ ಮಾರಾಟಗಾರರಿಗೂ ಸೂಚನೆ ನೀಡಿದೆ.
ಈ ಬಗ್ಗೆ ಕಠ್ಮಂಡುವಿನಲ್ಲಿರುವ ಪತಂಜಲಿ ಆಯುರ್ವೇದ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲವೆಂದು ಹೇಳಲಾಗಿದೆ.
ಪತಂಜಲಿ ಸೇರಿದಂತೆ ಆಯುರ್ವೇದ ಉತ್ಪನ್ನಗಳು ಎಂದು ಭಾರತದಲ್ಲಿ ಮಾರಾಟ ಮಾಡುವ ಶೇ. 40 ರಷ್ಟು ಉತ್ಪನ್ನಗಳು ಕಳಪೆ ಗುಣಮಟ್ಟದವು ಎಂದು ಆರ್ ಆರ್ ಟಿಐ ಇತ್ತೀಚಿಗೆ ಹೇಳಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.