'ಹಿಂದೂ ಆತಂಕವಾದಿಯಲ್ಲ, ಓರ್ವ ಸಂಘಿ ಆತಂಕವಾದಿಯಾಗುತ್ತಾನೆ' ಹರ್ಯಾಣ ಮಂತ್ರಿಗೆ ದಿಗ್ವಿಜಯ್ ಸಿಂಗ್ ಟಾಂಗ್

By Suvarna Web DeskFirst Published Jun 22, 2017, 4:00 PM IST
Highlights

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ನಿಂದನೆಗೊಳಗಾಗುವ ಹರ್ಯಾಣದ ಹಿರಿಯ ಮಂತ್ರಿ ಅನಿಲ್ ವಿಜ್'ರಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಾತಿನಲ್ಲೇ ಟಾಂಗ್ ನೀಡಿದ್ದಾರೆ.

ಹರ್ಯಾಣ(ಜೂ.22): ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ನಿಂದನೆಗೊಳಗಾಗುವ ಹರ್ಯಾಣದ ಹಿರಿಯ ಮಂತ್ರಿ ಅನಿಲ್ ವಿಜ್'ರಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಾತಿನಲ್ಲೇ ಟಾಂಗ್ ನೀಡಿದ್ದಾರೆ.

ಹರ್ಯಾಣದ ಹಿರಿಯ ಮಂತ್ರಿ ತಮ್ಮ ಮಾತಿನ ನಡುವೆ 'ಓರ್ವ ಹಿಂದೂ ಯಾವತ್ತೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಯಾಕೆಂದರೆ ಹಿಂದೂಗಳಿಗೆ ಭಯೋತ್ಪಾದನೆ ಮಾಡುವುದನ್ನು ಕಲಿಸಲಿಲ್ಲ. ಒಂದು ವೇಳೆ ಹಿಂದೂಗಳು ಭಯೋತ್ಪಾದಕರಾಗಿದ್ದರೆ ಈ ಕ್ಷೇತ್ರದಲ್ಲಿ ಬೇರಾವುದೇ ಭಯೋತ್ಪಾದಕರು ಇರುತ್ತಿರಲಿಲ್ಲ. ಅಲ್ಲದೇ 'ಹಿಂದೂ ಆತಂಕವಾದಿ' ಎಂಬ ನಾಮಪದವೇ ಇಲ್ಲ' ಎಂದಿದ್ದರು.

Latest Videos

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಯಾವತ್ತೂ ಸುದ್ದಿಯಾಗುವ ಅನಿಲ್ ವಿಜ್'ರವರ ಈ ಹೇಳಿಕೆಗೆ ಮರುತ್ತರ ನೀಡಿರುವ ಕಾಂಗ್ರೆಸ್ ನೇತಾರ ದಿಗ್ವಿಯ್ ಸಿಂಗ್ 'ಅವರು(ಅನಿಲ್ ವಿಜ್) ಸರಿಯಾಗಿಯೇ ಹೇಳಿದ್ದಾರೆ. ಓರ್ವ ಹಿಂದೂ ಯಾತ್ತೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಆದರೆ ಸಂಘಿ ಭಯೋತ್ಪಾದಕನಾಗಲು ಸಾಧ್ಯ' ಎಂದು ಟಾಂಗ್ ನೀಡಿದ್ದಾರೆ. ಇನ್ನು ಬಿಜೆಪಿಯ ವೈಚಾರಿಕ ಸಂರಕ್ಷಕರೆಂದೇ ಕರೆಯಲ್ಪಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ಸದ ಸದಸ್ಯರನ್ನು ಸಾಮಾನ್ಯವಾಗಿ ಸಂಘಿಗಳೆಂದು ಕರೆಯುತ್ತಾರೆ.

ಇನ್ನು 2015ರಲ್ಲಿ 63 ವರ್ಷದ ಅನಿಲ್ ವಿಜ್'ರವರು ಯೋಗವನ್ನು ವಿರೋಧಿಸುವವರೆಲ್ಲರೂ 'ದೇಶದ್ರೋಹಿಗಳು' ಎಂಬ ಹೇಳಿಕೆ ನೀಡಿ ವೊಇವಾದಕ್ಕೊಳಗಾಗಿದ್ದರು. ಅಲ್ಲದೇ ಕೆಲ ತಿಂಗಳುಗಳ ಹಿಂದಷ್ಟೇ ಕಾಂಗ್ರೆಸ್'ನ್ನು 'ಬ್ರಿಟಿಷರ ಮಗು' ಎಂದಿದ್ದರು. ಯಾಕೆಂದರೆ ಈ ಪಕ್ಷವನ್ನು ಬ್ರಿಟಿಷ್ ಪ್ರಜೆಯಾಗಿದ್ದ ಸರ್ ಎ. ಓ ಹ್ಯೂಮ್ ಸ್ಥಾಪಿಸಿದ್ದರು. ಇನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನೂ ಬೊಟ್ಟು ಮಾಡಿ 'ಬಾಪೂಜಿಯವರ ನೆರಳಿನಿಂದ ಖಾದಿಗೂ ಯಾವುದೇ ಲಾಭವಾಗಿಲ್ಲ. ೀಗ ನೋಟುಗಳೂ ಮೌಲ್ಯ ಕಳೆದುಕೊಂಡಿವೆ' ಎಂಬ ಹೇಳಿಕೆ ನೀಡಿದ್ದು, ಇದರಿಂದಾಗಿ ಖುದ್ದು ಬಿಜೆಪಿ ಪಕ್ಷವೇ ಇವರ ಮಾತುಗಳನ್ನು ಸಾರ್ವಜನಿಕವಾಗಿ ಟೀಕಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.

 

click me!