‘ನ್ಯಾಷನಲ್‌ ಹೆರಾಲ್ಡ್‌' ಖರೀದಿ ಕಾಂಗ್ರೆಸ್ಸಿಗರಿಗೆ ಕಡ್ಡಾಯ?

By Suvarna Web DeskFirst Published Jun 5, 2017, 10:05 AM IST
Highlights

ಕಾಂಗ್ರೆಸ್‌ನ ಎಲ್ಲಾ ಸಚಿವ, ಶಾಸಕರು ಮತ್ತು ಪದಾಧಿಕಾರಿಗಳು ಕಡ್ಡಾಯವಾಗಿ ನ್ಯಾಷನಲ್‌ ಹೆರಾಲ್ಡ್‌'ನ ಚಂದಾದಾರರಾಗಿ ಪತ್ರಿಕೆ ಖರೀದಿ ಮಾಡಬೇಕು. ಜತೆಗೆ ಪ್ರತಿಯೊಬ್ಬರು ತಲಾ 100 ಜನ ಓದುಗರನ್ನು ತಮ್ಮ ಕಡೆಯಿಂದ ಸೃಷ್ಟಿಸಬೇಕು ಎಂದು ಪಕ್ಷ ಸೂಚನೆ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು:  ಬೆಂಗಳೂರಿನಲ್ಲಿ ಜೂ.12ಕ್ಕೆ ಪುನಾರಂಭ ಮಾಡಲಿರುವ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಮೊದಲಿಗೆ ಉರ್ದು ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ವಾರಕ್ಕೊಮ್ಮೆ ಹೊರತರಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ.

ಜೂ.12ರಂದು ಈ ಎರಡೂ ಭಾಷೆಗಳಲ್ಲಿ ಪತ್ರಿಕೆಯ ಪುನಾರಂಭದ ಆವೃತ್ತಿಗಳು ಹೊರಬರಲಿವೆ. ನಂತರದ ದಿನಗಳಲ್ಲಿ ಹಿಂದಿ ಭಾಷೆಯಲ್ಲೂ ಪತ್ರಿಕೆ ಮುದ್ರಿಸಿ ದಿನ ಪತ್ರಿಕೆಯಾಗಿ ಮಾರ್ಪಡಿಸಲಾಗುತ್ತದೆ.

ಕಾಂಗ್ರೆಸ್‌ನ ಎಲ್ಲಾ ಸಚಿವ, ಶಾಸಕರು ಮತ್ತು ಪದಾಧಿಕಾರಿಗಳು ಕಡ್ಡಾಯವಾಗಿ ಚಂದಾದಾರರಾಗಿ ಪತ್ರಿಕೆ ಖರೀದಿ ಮಾಡಬೇಕು. ಜತೆಗೆ ಪ್ರತಿಯೊಬ್ಬರು ತಲಾ 100 ಜನ ಓದುಗರನ್ನು ತಮ್ಮ ಕಡೆಯಿಂದ ಸೃಷ್ಟಿಸಬೇಕು ಎಂದು ಪಕ್ಷ ಸೂಚನೆ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಜೂ.11ಕ್ಕೆ ರಾಹುಲ್‌ ಆಗಮನ?

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪುನಾ ರಂಭ ಕಾರ‍್ಯ ಕ್ರಮ ಜೂ.12 ರಂದು ಇದ್ದರೂ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಜೂ.11ಕ್ಕೆ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೂ.11ರಂದು ನಗರದ ಕೆಲ ಕಾಲೇಜು ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುವ ಪ್ರಯತ್ನ ನಡೆಯುತ್ತಿದೆ. ಕಾರ್ಯಕ್ರಮ ಇನ್ನೂ ಖಚಿತವಾಗಿಲ್ಲ.

click me!