ಚಿಂಚೋಳಿ ಕ್ಷೆತ್ರಕ್ಕೆ ಸುಭಾಷ್ ರಾಠೋಢ್ ಬಹುತೇಕ ಖಚಿತ| ಮಲ್ಲಿಕಾರ್ಜುನ ಖರ್ಗೆಗೂ ಆಪ್ತರಾಗಿರೋ ಸುಭಾಷ್ ರಾಠೋಡ್| ಬಂಜಾರಾ ಸಮಯದಾಯವನ್ಜು ಪ್ರತಿನಿಧಿಸುವ ಹಿನ್ನೆಲೆ ಸುಭಾಷ್ ರಾಠೋಡ್ ಗೆ ಟಿಕೇಟ್ ಸಿಗುವ ಸಾಧ್ಯತೆ ದಟ್ಟ.
ಬೆಂಗಳೂರು, [ಏ.27]: ಚಿಂಚೋಳಿ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಂಸ್ ನಿಂದ ಸುಭಾಷ್ ರಾಠೋಢ್ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇಂದು [ಶನಿವಾರ] ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಂಚೋಳಿ ಹಾಗೂ ಕುಂದಗೋಳು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಚರ್ಚೆ ನಡೆಯಿತು.
undefined
ಚಿಂಚೋಳಿ ಉಪಸಮರ: ವರಸೆ ಬದಲಿಸಿದ ಮಾಜಿ ಸಚಿವ ವಲ್ಯಾಪುರೆ
ಈ ಸಭೆಯಲ್ಲಿ ಚಿಂಚೋಳಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆಗೂ ಆಪ್ತರಾಗಿರೋ ಸುಭಾಷ್ ರಾಠೋಡ್ ಹೆಸರು ಬಲವಾಗಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ ಕ್ಷೇತ್ರದ ಟಿಕೆಟ್ ಸುಭಾಷ್ ರಾಠೋಢ್ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ಮತ್ತೊಂದೆಡೆ ಉಪಚುನಾವಣೆ ಟಿಕೆಟ್ ಸಿಗುತ್ತೆ ಎಂದು ಮೊನ್ನೇ ಅಷ್ಟೇ ಮುಕ್ತಾಯಗೊಂಡ ಲೋಕಸಭಾ ಎಲೆಕ್ಷನ್ ನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಾಬುರಾವ್ ಚೌಹಾಣ್ ಗೆ ನಿರಾಸೆಯಾಗಿದೆ.
ಚಿಂಚೋಳಿ: ಪ್ರಿಯಾಂಕ್ ಖರ್ಗೆಗೆ ಜಾಧವ್ ಸವಾಲ್
ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಲಂಬಾಣಿ, ಲಿಂಗಾಯತ ಹಾಗೂ ಕಬ್ಬಲಿಗ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಲಂಬಾಣಿ ಸಮುದಾಯದ ಮತ ಜಾಸ್ತಿ ಇರುವ ಪರಿಣಾಮವೇ ಕಾಂಗ್ರೆಸ್ ಲಂಬಾಣಿ ಸಮುದಾಯದ ಮುಖಂಡನಿಗೆ ಮಣೆ ಹಾಕಲು ಮುಂದಾಗಿದೆ.
ಮತ್ತೊಂದೆಡೆ ಬಿಜೆಪಿಯೂ ಸಹ ಅದೇ ಸಮುದಾಯದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ಅಂತಿಮಗೊಳಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಒಂದೇ ಸಮುದಾಯಕ್ಕೆ ಟಿಕೆಟ್ ನೀಡಿಕೆಗೆ ಮಣೆ ಹಾಕಿದ್ದನ್ನು ಅವಲೋಕಿಸಿದರೆ ಕ್ಷೇತ್ರದಲ್ಲಿ ಜಾತಿ ಎಷ್ಟು ಪರಿಣಾಮ ಬೀರಿದೆ ಎನ್ನುವುದನ್ನು ನಿರೂಪಿಸುತ್ತದೆ. ಚಿಂಚೋಳಿ ವಿಧಾನಸಭೆಗೆ ಇದೇ ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.