ಮಹಿಳಾ ಕಾಲೇಜುಗಳನ್ನು ಮಹಿಳಾ ವಿವಿಗೆ ಸೇರಿಸುವುದಕ್ಕೆ ವಿದ್ಯಾರ್ಥಿನಿಯರ ವಿರೋಧ

Published : Jan 25, 2017, 04:32 PM ISTUpdated : Apr 11, 2018, 12:51 PM IST
ಮಹಿಳಾ ಕಾಲೇಜುಗಳನ್ನು ಮಹಿಳಾ ವಿವಿಗೆ ಸೇರಿಸುವುದಕ್ಕೆ ವಿದ್ಯಾರ್ಥಿನಿಯರ ವಿರೋಧ

ಸಾರಾಂಶ

ರಾಜ್ಯ ಸರ್ಕಾರ ಈಗಾಗಲೇ ಮಹಿಳಾ ಕಾಲೇಜುಗಳನ್ನು ವಿಜಯಪುರದ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸುವ ವಿಚಾರವಾಗಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ವಿಶ್ವವಿದ್ಯಾಲಯದ ಉಪಸಮಿತಿಯ ತಂಡ ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿತ್ತು.

ರಾಮನಗರ (ಜ.25): ರಾಜ್ಯದ ಮಹಿಳಾ ಕಾಲೇಜುಗಳನ್ನು ವಿಜಯಪುರದ ‘ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ’ಕ್ಕೆ ಸೇರ್ಪಡೆಗೊಳಿಸುವ ಸರ್ಕಾರದ ನೀತಿಯನ್ನು ವಿರೋಧಿಸಿ ರಾಮನಗರದಲ್ಲಿ ಇಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಮಹಿಳಾ ಕಾಲೇಜುಗಳನ್ನು ವಿಜಯಪುರದ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸುವ ವಿಚಾರವಾಗಿ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ವಿಶ್ವವಿದ್ಯಾಲಯದ ಉಪಸಮಿತಿಯ ತಂಡ ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿತ್ತು.

ಈ ವೇಳೆ ಕಾಲೇಜಿನ ಗೇಟ್‌’ಗೆ ಬೀಗ ಜಡಿದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಉಪಸಮಿತಿ ತಂಡವನ್ನು ಕಾಲೇಜು ಆವರಣದ ಒಳಗೂ ಸಹ ಕಾಲಿಡದಂತೆ ವಾಪಾಸು ಕಳುಹಿಸಿದ್ದಾರೆ.

ಇದೇ ವೇಳೆ ಸ್ಥಳೀಯ ಮುಖಂಡರು ಹಾಗೂ ವಿದ್ಯಾರ್ಥಿನಿಯರ ಪೋಷಕರು ಉಪಸಮಿತಿ ತಂಡದ ಜೊತೆ ವಾಗ್ವಾದ ಕೂಡ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಉಪಸಮಿತಿಯ ಮಂಡ್ಯ ಪ್ರಾದೇಶಿಕ ಕೇಂದ್ರದ ಡಾ.ಚಂದ್ರಪ್ಪ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳನ್ನು ತಿಳಿಸಿ ಮಹಿಳಾ ವಿವಿ ಸೇರ್ಪಡೆಗೆ ವಿರೋಧಿಸಿ ಮನವಿ ನೀಡಿದ್ದಾರೆ.

ಮನವಿ ಪತ್ರವನ್ನು ವಿಶ್ವವಿದ್ಯಾಲಯಕ್ಕೆ ನೀಡಿ ಸರ್ಕಾರಕ್ಕೆ ಮುಟ್ಟಿಸುವುದಾಗಿ ಅವರು ತಿಳಿಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿ ನರಮೇಧ ನಡೆಸಿದ ತಂದೆ-ಮಗನಿಗೆ ಐಸಿಸ್‌ ಲಿಂಕ್‌ ದೃಢ
ಪ್ರಧಾನಿ ಮೋದಿ ಕೂರಿಸಿ ಜೋರ್ಡಾನ್‌ ಪ್ರಿನ್ಸ್‌ ಕಾರು ಚಾಲನೆ!