ಅಮೆರಿಕದಲ್ಲಿ 1 ಲಕ್ಷ ಎಕರೆ ಜಮೀನು ಖರೀದಿ...!

Published : Jan 25, 2017, 03:03 PM ISTUpdated : Apr 11, 2018, 12:47 PM IST
ಅಮೆರಿಕದಲ್ಲಿ 1 ಲಕ್ಷ ಎಕರೆ ಜಮೀನು ಖರೀದಿ...!

ಸಾರಾಂಶ

ಓಲಾ,ಉಬರ್ ಸೇವೆಗೆ ಕಾರು ಖರೀದಿಸಿದವರಿಗೆ ಡೌನ್ ಪೇಮೆಂಟ್ ಸರ್ಕಾರದಿಂದಲೇ ಪಾವತಿ ಮಾಡಲಾಗುವುದು ಎಂದು ಪ್ರಣಾಳಿಕೆ ಘೋಷಿಸಲಾಗಿದೆ.

ಲೂಧಿಯಾನ(ಜ.25): ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಒಬ್ಬರನ್ನೊಬ್ಬರು ಮೀರಿಸುವಂತೆ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಪಂಜಾಬ್‌'ನ ಆಡಳಿತಾರೂಢ ಶಿರೋಮಣಿ ಅಕಾಲಿ ದಳವು, ಪಕ್ಷ ಅಧಿಕಾರಕ್ಕೆ ಬಂದರೆ ಅಮೆರಿಕ ಮತ್ತು ಕೆನಡಾದಲ್ಲಿ ಭಾರಿ ಪ್ರಮಾಣದ ಭೂಮಿ ಖರೀದಿಸಿ ವಲಸೆ ಹೋಗುವ ಪಂಜಾಬಿಗಳಿಗೆ ಅದನ್ನು ನೀಡುವುದಾಗಿ ಘೋಷಿಸಿದೆ.

ಪಂಜಾಬ್ ಸರ್ಕಾರವು ಅಮೆರಿಕ ಮತ್ತು ಕೆನಡಾದಲ್ಲಿ ಒಂದು ಲಕ್ಷ ಎಕರೆ ಭೂಮಿ ಖರೀದಿಸಲಿದೆ. ರೈತರಿಗೆ ಹಾಗೂ ಪಂಜಾಬ್‌'ನಿಂದ ವಲಸೆ ಹೋಗ ಬಯಸುವವರಿಗೆ ಅಲ್ಲಿ ನೆಲೆಸಲು ಇದರಿಂದ ನೆರವಾಗಲಿದೆ. ಜತೆಗೆ, ಆ ದೇಶಗಳಲ್ಲಿ ಕಾಯಂ ನಿವಾಸಿ ಸ್ಥಾನಮಾನವನ್ನೂ ಇದು ಒದಗಿಸಿಕೊಡಲಿದೆ ಎಂದು ಪ್ರಣಾಳಿಕೆ ಬಿಡುಗಡೆ ವೇಳೆ ಪಂಜಾಬ್ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಆದರೆ, ಈ ಯೋಜನೆ ಹೇಗೆ ಜಾರಿಯಾಗಲಿದೆ ಮತ್ತು ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡಲಾಗುವುದು ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.

ಉಳಿದಂತೆ ಮದ್ಯವ್ಯಸನ ಮುಕ್ತರಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ, ಸಣ್ಣ ರೈತರ ಸಾಲ ಮನ್ನಾ, ಓಲಾ,ಉಬರ್ ಸೇವೆಗೆ ಕಾರು ಖರೀದಿಸಿದವರಿಗೆ ಡೌನ್ ಪೇಮೆಂಟ್ ಸರ್ಕಾರದಿಂದಲೇ ಪಾವತಿ ಮಾಡಲಾಗುವುದು ಎಂದು ಪ್ರಣಾಳಿಕೆ ಘೋಷಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!