
ಶ್ರೀನಗರ(ಆ.19): ಪಾಕಿಸ್ತಾನದಿಂದ ಸಾತಂತ್ರ್ಯ ಬಯಸಿ ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ)ದ ವಿದ್ಯಾರ್ಥಿ ಸಂಘಟನೆ ಸ್ಥಳೀಯ ನಾಯಕ ಲಿಖಾಯತ್ ಖಾನ್ ನೇತೃತ್ವದಲ್ಲಿ ಬೀದಿಗಿಳಿದೆದೆ
ಜಮ್ಮು ಮತ್ತು ಕಾಶ್ಮೀರದ ಜಾಂಡಿಲಿಯಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಜೆಕೆಎನ್'ಎಸ್'ಎಫ್) ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಜಾಂಡಿಲಿ ಪ್ರದೇಶದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿದ್ರು. ‘ಕಾಶ್ಮೀರ ಬಚನಾಯೆ ನಿಕ್ಲೆ ಹೈ, ಆವೋ ಹಮಾರಾ ಸಾಥ್ ಚಲೋ’ ಅಂತ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ವಿವಾದಿತ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ದ ವಿದ್ಯಾರ್ಥಿಗಳು ಧ್ವನಿಯೆತ್ತಿದ್ದಾರೆ. ಪಾಕಿಸ್ತಾನದ ಪಡೆಗಳು ಪಿಓಕೆನಲ್ಲಿ ಸಾಕಷ್ಟು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಪಾಕಿಸ್ತಾನ ಇಲ್ಲಿ ನಿಯೋಜಿಸಿರುವ ರಕ್ಷಣಪಡೆಗಳನ್ನು ಶೀಘ್ರವೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಂತಿಯುತ ಸ್ಥಳವನ್ನು ಹಾಳು ಮಾಡಲು ಪಾಕಿಸ್ತಾನ ಇಲ್ಲಿ ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಅಲ್ಲದೇ ಅಮಾಯಕ ನಾಗರಿಕರ ಮೇಲೆ ದೌರ್ಜನ್ಯವೆಸಗುತ್ತಿದೆ ಎಂದು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.