ಶ್ರೀಗಳ ಆಶಯದಂತೆ ಭಕ್ತರಿಗೆ ಅನ್ನದ ಮಹತ್ವ ತಿಳಿಸಿದ ವಿದ್ಯಾರ್ಥಿ

Jan 23, 2019, 11:20 AM IST

ಸಿದ್ಧಗಂಗಾ ಶ್ರೀಗಳೆಂದರೆ ಮಕ್ಕಳಿಗೆ ಅಪಾರ ಭಯ, ಭಕ್ತಿ ಜಾಸ್ತಿ. ಶ್ರೀಗಳು ಕೂಡಾ ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ಬೆಳೆಸುತ್ತಿದ್ದರು. ಅದಕ್ಕೆ ಉದಾಹರಣೆ ಎಂಬಂತೆ ವಿದ್ಯಾರ್ಥಿಯೊಬ್ಬ ನಡೆದುಕೊಂಡಿದ್ದಾನೆ. ಮಠದ ಭಕ್ತರೊಬ್ಬರು ಅನ್ನ ದಾಸೋಹದಲ್ಲಿ ಅನ್ನ ಚೆಲ್ಲಲು ಮುಂದಾದಾಗ ಶಿವು ಎಂಬ ವಿದ್ಯಾರ್ಥಿ ಅವರನ್ನು ತಡೆದು ಅನ್ನ ಬಿಡದಂತೆ ಒತ್ತಾಯಿಸಿದ್ದಾನೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.