
ಕ್ಯಾಲಿಫೋರ್ನಿಯಾ(ಡಿ.21): ಈ ಜಗತ್ತು ಅದೆಷ್ಟು ವಿಸ್ಮಯವೋ ಆಗಸ ಕೂಡ ಅಷ್ಟೇ ವಿಸ್ಮಯ. ಅಸಂಖ್ಯಾತ ರಹಸ್ಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ದಿಗಂತದಲ್ಲಿ ದಿನಕ್ಕೊಂದರಂತೆ ಅಚ್ಚರಿಯ ಘಟನಾವಳಿಗಳು ನಡೆಯುತ್ತಲೇ ಇರುತ್ತವೆ.
ಅದರಂತೆ ಕ್ಯಾಲಿಫೋರ್ನಿಯಾದಲ್ಲಿ ಮಾನವ ಈ ಹಿಂದೆಂದೂ ಕಂಡಿರದಂತ ವಿಸ್ಮಯ ಘಟನೆಯೊಂದು ನಡೆದಿದೆ. ನಗರದ ರಾತ್ರಿ ಆಗಸದಲ್ಲಿ ವಿಚಿತ್ರ ಬೆಳಕೊಂದು ಕಂಡಿದ್ದು, ಯಾವುದೇ ಚಲನೆ ಇಲ್ಲದ ಈ ಬೆಳಕನ್ನು ಕಂಡು ಜನರು ದಂಗಾಗಿದ್ದಾರೆ.
ಕ್ಯಾಲಿಫೋರ್ನಿಯಾ ಆಗಸದಲ್ಲಿ ಅತ್ಯಂತ ಸ್ಪಷ್ಟವಾಗಿ ಮತ್ತು ಬೃಹತ್ ಗಾತ್ರದಲ್ಲಿ ಕಂಡ ಈ ಬೆಳಕನ್ನು ಕಂಡು ಜನ ಗಾಬರಿಗೊಂಡಿದ್ದಾರೆ. ಆದರೆ ಈ ಬೆಳಕು ಏನು ಎಂಬುದು ಯಾರಿಗೂ ಅರ್ಥವಾಗಿಲ್ಲ.
ಆಗಸದಲ್ಲಿ ಕಂಡ ಈ ಅಚ್ಚರಿಯನ್ನು ಜನ ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನು ರಾಷ್ಟ್ರೀಯ ಹವಾಮಾನ ಸೇವೆ ಇಲಾಖೆ ಇದೊಂದು ಉರಿದು ಬೂದಿಯಾದ ಕ್ಷುದ್ರಗ್ರಹ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.