ಭೂಮಿಯ ವೈಚಿತ್ರ್ಯವೇ ಹಾಗೆ. ವಿಭಿನ್ನ ಪರಿಸರ, ವಿಭಿನ್ನ ವಾತಾವರಣ.. ಒಂದು ಕಡೆ ಹಗಲು ಇನ್ನೊಂದು ಕಡೆ ರಾತ್ರಿ. ಭೂಮಿಯ ಪರಿಭ್ರಮಣೆ ಎಲ್ಲದರ ಮೇಲೆಯೂ ತನ್ನ ಪರಿಣಾಮ ಬೀರುತ್ತಲೆ ಇದೆ.
ಉತ್ತರ ಗೋಳಾರ್ಧದಲ್ಲಿ ಅತ್ಯಂತ ಚಿಕ್ಕ ಹಗಲು ದಾಖಲಾಗಿದೆ. ಅತಿಚಿಕ್ಕ ಹಗಲು ಅತಿದೊಡ್ಡ ರಾತ್ರಿಗೆ ಡಿಸೆಂಬರ್ 21 ಸಾಕ್ಷಿಯಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ಗೋಳಾರ್ಧದಲ್ಲಿ ಅತಿದೊಡ್ಡ ಹಗಲು ದಾಖಲಾಗಿದೆ.
ಉತ್ತರ ಗೋಳಾರ್ಧದದಲ್ಲಿ ಚಳಿಗಾಲವಿದ್ದರೆ ದಕ್ಷಿಣ ಗೋಳಾರ್ಧದದಲ್ಲಿ ಬೇಸಿಗೆ ಕಾಲವಿದೆ. ಭೂಮಿಯ ಪರಿಭ್ರಮಣೆ ಮತ್ತು ಸೂರ್ಯನ ಪಥ ಬದಲಾವಣೆ ವಿಶಿಷ್ಟ ದಿನಕ್ಕೆ ಕಾರಣವಾಗುತ್ತದೆ. ಪ್ರತಿ ವರ್ಷವೂ ಡಿಸೆಂಬರ್ 21 ರಂದು ದೀರ್ಘ ಹಗಲು ಅಥವಾ ದೀರ್ಘ ರಾತ್ರಿ ಆಯಾ ಗೋಳಗಳಲ್ಲಿ ಕಂಡುಬರುತ್ತಲೇ ಇರುತ್ತದೆ. ಡಿಸೆಂಬರ್ 21 ರಂದು ಸೂರ್ಯನು ತನ್ನ ಪಥ ಬದಲಾಯಿಸುತ್ತನೆ ಎಂದು ಹೇಳಲಾಗುತ್ತದೆ.
undefined
ಕೊಡಗಿನ ಭೂ ಕುಸಿತಕ್ಕೆ ಅಸಲಿ ಕಾರಣ ಏನು?
ಮಕರ ಸಂಕ್ರಮಣಕ್ಕೂ ಸಹ ಜ್ಯೋತಿಷಿಗಳು ಸೂರ್ಯನ ಪಥ ಬದಲಾವಣೆಯನ್ನೇ ಆಧಾರವಾಗಿ ನೀಡುತ್ತಾರೆ. ಭಾರತದಲ್ಲಿ ಚಳಿಗಾಲವಿದ್ದು ಉತ್ತರ ಗೋಳಾರ್ಧದ ಪರಿಣಾಮ ಯಾವುದು ಆಗದೇ ಇದ್ದರೂ ಇದೊಂದು ವೈಜ್ಞಾನಿಕ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲೇಬೇಕು