ಒಂದೇ ಸಿರಿಂಜ್'ನಲ್ಲಿ 10ಕ್ಕೂ ಹೆಚ್ಚು ಜನರಿಗೆ ಇಂಜಕ್ಷನ್: ನಕಲಿ ವೈದ್ಯನ ಬಣ್ಣ ಬಯಲು ಮಾಡಿದ ಸುವರ್ಣನ್ಯೂಸ್

By Suvarna Web DeskFirst Published Jun 30, 2017, 8:02 AM IST
Highlights

ಈತನಿಗೆ ಅದ್ಯಾರು ಐಡಿಯಾ ಕೊಟ್ಟರೋ ಗೊತ್ತಿಲ್ಲ. ದುಡ್ಡು ಮಾಡಲು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ. ಬಳಸಿದ  ಸಿರಂಜನ್ನೇ 10 ಮಂದಿಗೆ ಚುಚ್ಚಿ ಕಳುಹಿಸುತ್ತಿದ್ದ. ಕೊನೆಗೂ ಈ ಮೋಸದ  ಜಾಲಕ್ಕೆ ಸುವರ್ಣನ್ಯೂಸ್​ ಬ್ರೇಕ್​ ಹಾಕಿದೆ.

ಚಿಕ್ಕಬಳ್ಳಾಪುರ(ಜೂ.30): ಈತನಿಗೆ ಅದ್ಯಾರು ಐಡಿಯಾ ಕೊಟ್ಟರೋ ಗೊತ್ತಿಲ್ಲ. ದುಡ್ಡು ಮಾಡಲು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ. ಬಳಸಿದ  ಸಿರಂಜನ್ನೇ 10 ಮಂದಿಗೆ ಚುಚ್ಚಿ ಕಳುಹಿಸುತ್ತಿದ್ದ. ಕೊನೆಗೂ ಈ ಮೋಸದ  ಜಾಲಕ್ಕೆ ಸುವರ್ಣನ್ಯೂಸ್​ ಬ್ರೇಕ್​ ಹಾಕಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ಸಿರಿಂಜ್ ನಲ್ಲಿ 10ಕ್ಕೂ ಹೆಚ್ಚು ಮಂದಿಗೆ ಇಂಜೆಕ್ಷನ್ ನೀಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ  ನಕಲಿ  ವೈದ್ಯ ರಮಣನ  ಮೋಸದ ಜಾಲಕ್ಕೆ ಬ್ರೇಕ್​ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ  ಚಿಕ್ಕ ಕೋಣೆಯೊಂದರಲ್ಲಿ  ಈ ವಂಚಕ ರಮಣ ಕ್ಲಿನಿಕ್​ ನಡೆಸುತ್ತಿದ್ದ. ಈತನ  ವಂಚನೆಯನ್ನು  ಸುವರ್ಣನ್ಯೂಸ್​  ಬಟಾಬಯಲು ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಆರೋಗ್ಯಾಧಿಕಾರಿ ಈ ಬಗ್ಗೆ ಬಾಗೇಪಲ್ಲಿ ತಾಲೂಕು ಆರೋಗ್ಯಾಧಿಕಾರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.

ಆಂಧ್ರ ಮೂಲದ ಈ ನಕಲಿ ವೈದ್ಯ ಯಾವುದೇ ಖಾಯಿಲೆ ಇರಲಿ, ಕೊಡುವ ಇಂಜೆಕ್ಷನ್ ಸ್ಟಿರಾಯ್ಡ್, ಪೇಯ್ನ್ ಕಿಲ್ಲರ್ ಮಾತ್ರ. ಜೊತೆಗೆ ಒಂದೇ ಸಿರಿಂಜ್ ನಲ್ಲಿ ಹಲವು ಮಂದಿಗೆ ಇಂಜಿಕ್ಷನ್ ಕೊಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಆರೋಗ್ಯಾಧಿಕಾರಿಗಳು ನಕಲಿ ವೈದ್ಯನ ಕ್ಲಿನಿಕ್ ಗೆ ಬಾಗಿಲು ಹಾಕಿದ್ದಾರೆ. ಅಲ್ಲದೇ, ಈತನ ಬಳಿ ಸಿಕ್ಕ ಔಷಧಿಗಳನ್ನಡೆಲ್ಲಾ ಸೀಜ್ ಮಾಡಿದ್ದಾರೆ. ಇನ್ನೂ ಈತನಿಗೆ ಮೆಡಿಕಲ್ ಸ್ಟೋರ್ ನವರೇ ಔಷಧಿಗಳನ್ನು ಸಪ್ಲೆ ಮಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ.

ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಯಲ್ಲಂಪಲ್ಲಿ  ಗ್ರಾಮದಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದು, ಜನರಿಗೆ ಮೋಸ ಮಾಡುತ್ತಿದ್ದ. ಕೊನೆಗೂ ಈತನ ಮೋಸದ ಜಾಲಕ್ಕೆ ಸುವರ್ಣನ್ಯೂಸ್​ ಬ್ರೇಕ್​ ಹಾಕಿದೆ.

click me!