
ಬೆಂಗಳೂರು (ಡಿ.24): ಪವರ್ ಸ್ಟಾರ್ ಪುನಿತ್ ರಾಜ್'ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನಿಪುತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಗುರುವಾರ ರಿಲೀಸ್ ಆದ ಅಂಜನಿಪುತ್ರ ರಾಜ್ಯಾದ್ಯಂತ ಭಾರೀ ಕಲೆಕ್ಷನ್ ಕೂಡ ಮಾಡ್ತಾ ಇದೆ. ಆದರೆ ವಕೀಲರ ಸಮುದಾಯ ಅಂಜನಿಪುತ್ರನ ವಿರುದ್ಧ ಸಿಟ್ಟಿಗೆದ್ದು ಕೋರ್ಟ್ ಮೆಟ್ಟಿಲೇರಿದ್ದರು. ಚಿತ್ರದಲ್ಲಿ ರವಿಶಂಕರ್ ಡೈಲಾಗ್'ನ್ನು ಕಟ್ ಮಾಡಬೇಕು. ಅಲ್ಲಿಯವರೆಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ವಕೀಲರು ಕೋರ್ಟ್ನಲ್ಲಿ ಮನವಿ ಮಾಡಿದ್ದರು.
ಈ ಬಗ್ಗೆ ನಿನ್ನೆ ಸಂಜೆ 7 ಗಂಟೆಗೆ 'ಸುವರ್ಣ ನ್ಯೂಸ್ನಲ್ಲಿ' ನಡೆದ ಚರ್ಚಾ ಕಾರ್ಯಕ್ರಮದಲ್ಲಿ ವಕೀಲರ ಕೆಂಗಣ್ಣಿಗೆ ಗುರಿಯಾಗಿದ್ದ ಡೈಲಾಗ್ ಬಗ್ಗೆ ಪ್ರಶ್ನಿಸಿದಾಗ, ಚಿತ್ರ ವಿತರಕ ಜಾಕ್ ಮಂಜು ಪ್ರತಿಕ್ರಿಯಿಸಿ ಅವಹೇಳನಕಾರಿ ಹೇಳಿಕೆಯನ್ನು ಕಟ್ ಮಾಡಿ ವಿತರಿಸಲಾಗುವುದೆಂದು ಭರವಸೆ ನೀಡಿದರು. ಸದ್ಯ ಯಾವುದೇ ತಡೆ ಇಲ್ಲದೇ ಅಂಜನಿಪುತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.