ಲಿಕ್ಕರ್ ಮಾಫಿಯಾಗೆ ಶರಣಾಯಿತಾ ರಾಜ್ಯ ಸರ್ಕಾರ?: ಹೆದ್ದಾರಿ ಪಕ್ಕದ ಬಾರ್'ಗಳನ್ನ ಉಳಿಸಿಕೊಳ್ಳುವ ಪ್ರಯತ್ನ!

By Suvarna Web DeskFirst Published Jun 8, 2017, 8:07 AM IST
Highlights

ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವಂತೆ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.

ಬೆಂಗಳೂರು(ಜೂ.08): ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವಂತೆ ರಾಜ್ಯ ಸರ್ಕಾರ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದೆ.

ಅಧಿವೇಶನದಲ್ಲಿ ಕೆಲವು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸಲ್ಲಿಸಿದೆ. ಪ್ರಮುಖವಾಗಿ 850 ಕಿಲೋ ಮೀಟರ್  ನ್ಯಾಷನಲ್ ಹೈವೆಯನ್ನು ಡಿ ನೋಟಿಫೈ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಇದರಿಂದ ಹೆದ್ದಾರಿ ಪಕ್ಕದ ಬಾರ್ ಗಳಿಗೆ ರಿಲೀಫ್ ಸಿಗಲಿದೆ.

ಪಟ್ಟಣ, ಪಾಲಿಕೆ, ನಗರಗಳ ಹೆದ್ದಾರಿ ಪಕ್ಕದ ಬಾರ್ ಗಳಿಗೆ ಕೇಂದ್ರ ಕಡಿವಾಣ ಹಾಕಿತ್ತು. ಆದ್ರೆ ಸಿದ್ದರಾಮಯ್ಯ ಸರ್ಕಾರ ಬಾರ್ ಮಾಫಿಯಾಗೆ ತಲೆ ತೂಗಿದಂತಿದೆ.

 

click me!