ಟೆಹರಾನ್ ದಾಳಿ: ಮೃತರ ಸಂಖ್ಯೆ 12ಕ್ಕೆ; ದಾಳಿ ಹೊಣೆ ಹೊತ್ತ ಐಸಿಸ್

By Suvarna Web DeskFirst Published Jun 7, 2017, 8:49 PM IST
Highlights

ಇಂದು ಬೆಳಗ್ಗೆ ಒಂದೇ ಗಂಟೆಯ ಅಂತರದಲ್ಲಿ ಇರಾನ್'ನ ಸಂಸತ್ ಭವನ ಹಾಗೂ ಆಯತುಲ್ಲಾ ಖೊಮೇನಿ ಅವರ ಸಮಾಧಿ ಸ್ಥಳಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆನ್ನಲಾಗಿದೆ.

ಟೆಹರಾನ್, ಇರಾನ್(ಜೂ.07): ಇರಾನ್ ರಾಜಧಾನಿ ಟೆಹರಾನ್'ನಲ್ಲಿ ಸಂಸತ್ ಭವನ ಸೇರಿದಂತೆ ಎರಡು ಕಡೆ ನಡೆದ  ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ದಾಳಿಯ ಹೊಣೆಯನ್ನು ಐಸಿಸ್ ಸಂಘಟನೆ ಹೊತ್ತುಕೊಂಡಿದೆ.

ಇಂದು ಬೆಳಗ್ಗೆ ಒಂದೇ ಗಂಟೆಯ ಅಂತರದಲ್ಲಿ ಇರಾನ್'ನ ಸಂಸತ್ ಭವನ ಹಾಗೂ ಆಯತುಲ್ಲಾ ಖೊಮೇನಿ ಅವರ ಸಮಾಧಿ ಸ್ಥಳಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆನ್ನಲಾಗಿದೆ.

ಶಿಯಾ ಮುಸ್ಲಿಮರು ಹೆಚ್ಚಿರುವ ದೇಶದಲ್ಲಿ ಇದು ಐಸಿಸ್ ನಡೆಸಿರುವ ಮೊದಲ ದಾಳಿಯಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಸಂಸತ್ ಭವನಕ್ಕೆ ಮೂವರು ವ್ಯಕ್ತಿಗಳು ದಾಳಿ ಮಾಡಿದ್ದರೆ, ವ್ಯಕ್ತಿಯೊಬ್ಬ ಭವನದೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ.

ಮತ್ತೊಂದು ಘಟನೆಯಲ್ಲಿ ಆಯತುಲ್ಲಾ ಖೊಮೇನಿ ಸಮಾಧಿ ಸ್ಥಳದ ಆವರಣದೊಳಗೆ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಆತ್ಮಾಹುತಿ ಬಾಂಬರ್'ಗಳು ದಾಳಿ ನಡೆಸಿದ್ದಾರೆ.

click me!