ಹೈಟೆಕ್ ಸಿಟಿ ಮಂದಿಗೆ ಕಡಿಮೆ ದರದಲ್ಲಿ ಉತ್ತಮ ಊಟ; ಆ.15 ರಂದು ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ

Published : Jun 09, 2017, 09:03 PM ISTUpdated : Apr 11, 2018, 01:00 PM IST
ಹೈಟೆಕ್ ಸಿಟಿ ಮಂದಿಗೆ ಕಡಿಮೆ ದರದಲ್ಲಿ ಉತ್ತಮ ಊಟ; ಆ.15 ರಂದು  ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ

ಸಾರಾಂಶ

ಹಸಿವು ಮುಕ್ತ ಬೆಂಗಳೂರು ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಿಲಿಕಾನ್ ಸಿಟಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗ್ತಿದೆ. ನೂರು ಕೋಟಿ ವೆಚ್ಚದಲ್ಲಿ ಬಾಗಿಲು ತೆರೆಯಲಿರುವ ಇಂದಿರಾ ಕ್ಯಾಂಟೀನ್ ವಿಶೇಷತೆಗಳನ್ನು ಹೊಂದಿದೆ.

ಬೆಂಗಳೂರು (ಜೂ.09): ಹಸಿವು ಮುಕ್ತ ಬೆಂಗಳೂರು ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಸಿಲಿಕಾನ್ ಸಿಟಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗ್ತಿದೆ. ನೂರು ಕೋಟಿ ವೆಚ್ಚದಲ್ಲಿ ಬಾಗಿಲು ತೆರೆಯಲಿರುವ ಇಂದಿರಾ ಕ್ಯಾಂಟೀನ್ ವಿಶೇಷತೆಗಳನ್ನು ಹೊಂದಿದೆ.

ಹೈಟೆಕ್ ಸಿಟಿ ಮಂದಿಗೆ ಕಡಿಮೆ ದರದಲ್ಲಿ ಉತ್ತಮ ಊಟ ಕೊಡುವ ಇಂದಿರಾ ಕ್ಯಾಂಟೀನ್ ಅಗಷ್ಟ್ 15 ರಂದು ಲೋಕಾರ್ಪಣೆಗೊಳ್ಳಲಿದೆ. 28 ವಿಧಾನಸಭಾ ಕ್ಷೇತ್ರದ 200 ಕ್ಯಾಂಟೀನ್ ತೆರೆಯುವ ಯೋಜನೆ ಸರ್ಕಾರ ಹಾಕಿಕೊಂಡಿದೆ. ನಗರದ 199 ಕಡೆ ಇಂದಿರಾ ಕ್ಯಾಂಟೀನ್‌ಗಾಗಿ ತಮಿಳುನಾಡು ಕೃಷ್ಣಗಿರಿಯ ಕೆಫೆ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.ಇದು ಪೂರ್ವ ನಿರ್ಮಿತ ಕಾಂಕ್ರಿಟ್ ಗೋಡೆ, ನೆಲ ಹಾಗೂ ಛಾವಣಿಗಳ ಮೂಲಕ ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಿಸಲಿದೆ.24 ಚದರ ಅಡಿ ವಿಸ್ತೀರ್ಣದಲ್ಲಿ ಇಂದಿರಾ ಅಡುಗೆಕೋಣೆ ನಿರ್ಮಾಣವಾದರೆ  ಇಂದಿರಾ ಕ್ಯಾಂಟೀನ್ 12 ಅಥವಾ 14 ಚದರ ಅಡಿ ವಿಸ್ತೀರ್ಣದಲ್ಲಿ ಇರಲಿದೆ. ಕಟ್ಟಡ ನಿರ್ಮಾಣದ ವೆಚ್ಚ 28 ಲಕ್ಷ ರೂ. ಖರ್ಚಾಗುತ್ತೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.

ಇನ್ನು ಇಂದಿರಾ ಕಾಂಟೀನ್ ನಿರ್ಮಾಣದ ಕುರಿತು ಇಂದು ಪಾಲಿಕೆಯಲ್ಲಿ ಮಹತ್ವದ ಸಭೆ ಜರುಗಿತು. 198 ವಾರ್ಡ್ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಆ ಸಂದರ್ಭದಲ್ಲಿ ವಾರ್ಡ್ ಮಟ್ಟದಲ್ಲಿ ಕ್ಯಾಂಟೀನ್ ನಿರ್ಮಾಣದ ಜಾಗವನ್ನು ಅಂತಿಮಗೊಳಿಸಲಾಯಿತು.ಅಲ್ಲದೆ ಕ್ಯಾಂಟೀನ್’ಗೆ ಬೇಕಾಗಿರುವ ನೀರಿನ ವ್ಯವಸ್ಥೆ ಬಗ್ಗೆ ಜಲಮಂಡಳಿಗೆ ಸೂಚನೆ ನೀಡಲಾಗಿದೆ.ತಮಿಳುನಾಡು ಕೃಷ್ಣಗಿರಿಯ ಕೆಫೆ ಸಂಸ್ಥೆಗೆ ಗುತ್ತಿಗೆ ಅಂತಿಮವಾಗಿದ್ದು, ನಾಳೆ ಮೇಯರ್ ಪರಿಶೀಲನೆಗಾಗಿ ಕೃಷ್ಣಗಿರಿಗೆ ತೆರಳುವ ಸಾಧ್ಯತೆಗಳಿವೆ.

ಇನ್ನು ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಇಂದಿರಾ ಕ್ಯಾಂಟಿನ್ ನಿರ್ಮಿಸಿದಂತೆ ಸಾಕಷ್ಟು ಒತ್ತಡ ಬಂದ ಹಿನ್ನಲೆಯಲ್ಲಿ ಕೇಂದ್ರ ಕಚೇರಿ ಹಿಂಭಾಗದ ಸ್ಥಳದಲ್ಲಿ ಕ್ಯಾಂಟೀನ್ ನಿರ್ಮಿಸಲು ಮೇಯರ್ ನಿರ್ಧರಿಸಿದ್ದಾರೆ. ಇದರ ಜತೆಗೆ ಕೆ.ಆರ್.ಮಾರುಕಟ್ಟೆಯಲ್ಲೂ ತಲೆ ಎತ್ತಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರ 5 ರೂ. ಹಾಗೂ ಮಧ್ಯಾಹ್ನದ ಊಟ 10 ರೂ.ಗೆ ನೀಡಲಾಗುತ್ತದೆ.ಒಟ್ಟಾರೆ ಎಲ್ಲಾ ಅಂದುಕೊಂಡಂತೇ ಆದರೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೀಯ ಯೋಜನೆ ಇನ್ನೆರಡು ತಿಂಗಳಲ್ಲಿ ಚಾಲನೆಗೆ ಬರಲಿದೆ. ರಾಜಧಾನಿ ಬೆಂಗಳೂರು ಮಂದಿಗೆ ಕಡಿಮೆ ರೇಟಲ್ಲಿ ಉತ್ತಮ ಗುಣಮಟ್ಟದ ಊಟ, ತಿಂಡಿ ಸಿಗಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ
ಹೂವಿನಹಡಗಲಿ: ಕೇಳಿದ್ದು 237 ಕೊಠಡಿ, ಸರ್ಕಾರ ಕೊಟ್ಟಿದ್ದು ಒಂದೇ ಕೊಠಡಿ! ಮಕ್ಕಳ ಶಿಕ್ಷಣಕ್ಕೆ ಇಲ್ವಾ ಬೆಲೆ?