
ಬೆಂಗಳೂರು(ಮಾ.13): ಬೇಸಿಗೆ ಕಳೆಯುವವರೆಗೂ ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ನಿರ್ಬಂಧ ಹೇರಿರುವುದಾಗಿ ವನ್ಯಜೀವಿ ವಿಭಾಗ ಪ್ರಧಾನ ಮುಖ್ ಯಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 10ಕ್ಕೆ ತಮಿಳುನಾಡು ಅರಣ್ಯ ಪ್ರದೇಶದಲ್ಲಿ ದುರಂತ ಹಿನ್ನೆಲೆಯಲ್ಲಿ ಅಪಾಯ ತಪ್ಪಿಸುವುದಕ್ಕೆ ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಕ್ರಮ ಈ ಕ್ರಮ ಕೈಗೊಂಡಿದೆ.
ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ಚಾರಣಕ್ಕಾಗಿ ಯಾವುದೇ ರೀತಿ ಅನುಮತಿ ಸಿಗುವುದಿಲ್ಲ. ತಮಿಳುನಾಡು ಅರಣ್ಯ ಪ್ರದೇಶ ದುರಂತದಲ್ಲಿ ಹಲವರ ಸಾವು ಹಿನ್ನೆಲೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿಯೂ ಬೇಸಿಗೆಯಲ್ಲಿ ಚಾರಣ ನಿರ್ಬಂಧ ಹೇರಲಾಗಿದೆ.
ರಕ್ಷಿತಾರಣ್ಯ, ಇತರೆ ಸೂಕ್ಷ್ಮ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದ್ದು, ಬೇಸಿಗೆ ಕಾಲ ಪೂರ್ಣ, ಒಂದೆರಡು ಮಳೆ ಬೀಳುವವರೆಗು ಸಹ ಬ್ಯಾನ್ ಮುಂದುವರಿಯಲಿದೆ. ಪ್ರಮುಖವಾಗಿ ಬಂಡೀಪುರ,ನಾಗರಹೊಳೆ,ಭದ್ರಾ, ಮತ್ತು ಬಿ.ಆರ್.ಟಿ., ಕಾಳಿಹುಲಿ ಸಂರಕ್ಷಿತ ಪ್ರದೇಶವೂ ಸೇರಿ ರಾಜ್ಯದ ಅರಣ್ಯಗಳಿಗೆ ಈ ಆದೇಶ ಅನ್ವಯವಾಗಲಿದೆ.
25 ಮಹಿಳೆಯರು, ಮೂವರು ಮಕ್ಕಳನ್ನು ಒಳಗೊಂಡ 36 ಚಾರಣಿಗರ ತಂಡ ಮಾ.10ರಂದು ಕುರಂಗಿಣಿ ಬೆಟ್ಟವನ್ನು ತಲುಪಿತ್ತು. ಆದರೆ ಬೆಟ್ಟದಿಂದ ಇಳಿಯುವ ವೇಳೆ ತಂಡ ಕಾಡ್ಗಿಚ್ಚಿಗೆ ಸಿಕ್ಕಿಬಿದ್ದಿತ್ತು. ಈ ವೇಳೆ ಕಾಡ್ಗಿಚ್ಚಿಗೆ ಸಿಕ್ಕಿಬಿದ್ದವರ ಪೈಕಿ 9 ಜನ ದಾರುಣವಾಗಿ ಸಾವನ್ನಪ್ಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.