
ಬೆಂಗಳೂರು (ಜು.12): ಸದಾ ನಾಟಕ, ನೃತ್ಯ, ಸಂಗೀತದಿಂದ ಕಲಾ ರಸಿಕರನ್ನು ಕೈಬೀಸಿ ಕರೆಯುತ್ತಿದ್ದ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾಸೌಧ ಕಳೆದ 6 ತಿಂಗಳಿಂದ ರಂಗಚಟುವಟಿಕೆಗಳಿಲ್ಲದೆ ಪಾಳು ಬಿದ್ದಿದೆ. ಟೆಂಡರ್ ಸಮಸ್ಯೆಯಿಂದಾಗಿ ಬಿಬಿಎಂಪಿ ಇದಕ್ಕೆ ಬೀಗ ಜಡಿದಿದೆ.
ಪಿ ಡಿ ಸತೀಶ್ ಚಂದ್ರ ಎಂಬುವವರು 2009 ರಲ್ಲಿ ಕೆ.ಎಚ್ ಕಲಾಸೌಧ ನಿರ್ವಹಣೆಯ ಟೆಂಡರ್ ಪಡೆದಿದ್ದರು. 2014 ರಲ್ಲಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿತ್ತು. ಆ ನಂತರ ಬಿಬಿಎಂಪಿ ಟೆಂಡರ್ ಅವಧಿಯನ್ನು ವಿಸ್ತರಿಸಿತ್ತು. 2017 ಫೆಬ್ರವರಿ ನಂತರ ವಿಸ್ತರಣೆ ಆಗಿಲ್ಲ. ಹೀಗಾಗಿ ಕಳೆದ 6 ತಿಂಗಳಿಂದ ಕಲಾಸೌಧದಲ್ಲಿ ರಂಗ ಚಟುವಟಿಕೆಗಳು ಸ್ತಬ್ದಗೊಂಡಿದೆ. ಅನೇಕ ಕಲಾವಿದರು ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಾಸೌಧ ಉಳಿಸಿ ಎಂಬ ಹೆಸರಿನಲ್ಲಿ ಅಭಿಯಾನ ಕೂಡಾ ಆರಂಭವಾಗಿದೆ. ಬನ್ನಿ ನೀವೂ ಕೈ ಜೋಡಿಸಿ. ನಿಮ್ಮ ಸಹಿ ಹಾಕಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸಹಿ ಸಂಗ್ರಹ ಅಭಿಯಾನದ ಮೂಲಕ ಸಂಬಂಧಪಟ್ಟವರಿಗೆ ಕೇಳಿಕೊಳ್ಳುವುದೇನೆಂದರೆ;
* ಈ ಕೂಡಲೇ ಕಲಾಸೌಧವನ್ನು ಮರು ತೆರೆಯಬೇಕು.
* ಬಾಡಿಗೆಯನ್ನು ಈಗಿರುವಂತೆಯೇ ಇಡಬೇಕು. ಹೆಚ್ಚಿಸಬಾರದು. ಎಲ್ಲರಿಗೂ ಕೈಗೆಟಕುವ ದರವನ್ನು ನಿಗದಿಪಡಿಸಬೇಕು.
* ಕಲಾ ಸೌಧವನ್ನು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮಾತ್ರ ಮೀಸಲಿಡಬೇಕು. ಬೇರೆ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.