
ಹೈದ್ರಾಬಾದ್[ಫೆ.18]: ಕೇವಲ 10 ರು. ಗೆ ಸೀರೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ ಮಾಲ್ ಒಂದರ ಮುಂದೆ ಮಹಿಳೆಯರು ಮತ್ತು ಯುವತಿಯರ ಸೇರಿ ಅವರನ್ನು ನಿಯಂತ್ರಿಸಲಾಗದೇ ಪೊಲೀಸರ ಮೊರೆ ಹೋದ ಪ್ರಸಂಗ ನಡೆದಿದೆ.
ಇಲ್ಲಿನ ಸಿದ್ದಿಪೇಟೆಯ ಸಿಎಂಆರ್ ಶಾಪಿಂಗ್ ಮಾಲ್‌ನಲ್ಲಿ ಕೇವಲ 10 ರು.ಗೆ ಸೀರೆ ಮಾರಾಟದ ಆಫರ್ ಪ್ರಕಟಿಸಿತ್ತು. ಈ ಸುದ್ದಿ ಸುತ್ತುಮುತ್ತಲ ಪ್ರದೇಶದಲ್ಲಿ ಹಬ್ಬಿ, ಭಾನುವಾರ ಬೆಳಗ್ಗೆ ಏಕಾಏಕಿ ಸಾವಿರಾರು ಜನ ಮಾಲ್‌ನೊಳಗೆ ನುಗ್ಗಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.
ಇನ್ನು ಇದೇ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಭರ್ಜರಿಯಾಗಿ ಪಿಕ್‌ಪಾಕೆಟ್ ಕೂಡಾ ನಡೆಸಿದ್ದಾರೆ. ಹೀಗಾಗಿ ಸೀರೆ ಕೊಳ್ಳಲು ಬಂದವರು, ಚಿನ್ನದ ಸರ, ನಗದು, ಎಟಿಎಂ ಕಾರ್ಡ್ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ