ಪುಲ್ವಾಮ ದಾಳಿ : ಸೇನೆಯನ್ನೇ ಹೊಣೆ ಮಾಡಿದ ಮಾಜಿ ಕಾಂಗ್ರೆಸ್ ಸಂಸದೆ

Published : Feb 17, 2019, 02:59 PM IST
ಪುಲ್ವಾಮ ದಾಳಿ : ಸೇನೆಯನ್ನೇ ಹೊಣೆ ಮಾಡಿದ ಮಾಜಿ ಕಾಂಗ್ರೆಸ್ ಸಂಸದೆ

ಸಾರಾಂಶ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದ 44 ಯೋಧರು ವೀರಮರಣವನ್ನಪ್ಪಿದ್ದು, ದೇಶವೇ ಕಂಬನಿ ಮಿಡಿಯುತ್ತಿರುವಾಗ ಮಾಜಿ ಕಾಂಗ್ರೆಸ್ ಸಂಸದೆಯೋರ್ವರು ಈ ಘಟನೆಗೆ ಯೋಧರನ್ನೇ ಹೊಣೆ ಮಾಡಿದ್ದಾರೆ.

ನವದೆಹಲಿ: ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. 44 ಯೊಧರು ವೀರಮರಣವನ್ನಪ್ಪಿದ್ದು, ಪ್ರತಿಕಾರದ ಕಿಚ್ಚು ಭಾರತೀಯರ ಹೃದಯದಲ್ಲಿ ಹೊತ್ತಿದೆ. 

ಆದರೆ ಮಾಜಿ ಕಾಂಗ್ರೆಸ್ ಸಂಸದೇ ನೂರ್ ಬಾನೋ ಹುತಾತ್ಮ ಯೋಧರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ್ದಾರೆ. 

ಗುಪ್ತಚರ ಸಂಸ್ಥೆಗಳಿಗೆ  ಉಗ್ರರ ದಾಳಿಯ ಬಗ್ಗೆ ಮೊದಲೇ ತಿಳಿದಿದ್ದು, ಈ ಬಗ್ಗೆ ಎಚ್ಚರಿಕೆಯನ್ನು ರವಾನಿಸಲಾಗಿತ್ತು. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

ಪಾಕ್‌ಗೆ ಯಾಕೆ ಬೈಬೇಕು ಎಂದ ಸಿದ್ದುಗೆ ಬೈಬಾರದ್ದು ಬೈದ್ರು!

ಎಚ್ಚರಿಕೆ ಸಂದೇಶದ ಬಳಿಕ ಎಚ್ಚೆತ್ತುಕೊಂಡಿದ್ದರೆ,  ದಾಳಿ ಆಗುತ್ತಿರಲಿಲ್ಲ ಎಂದು ನೂರ್ ಬಾನೂ ಹೇಳಿದ್ದಾರೆ. 

ಹುತಾತ್ಮ ಅಪ್ಪನ ಚಿತೆಗೆ ಬೆಂಕಿ ಸ್ಪರ್ಶಿಸಿ, ಪ್ರಜ್ಞೆತಪ್ಪಿ ಬಿದ್ದ 10 ವರ್ಷದ ಮಗಳು!

ಜೈಶ್  ಇ ಮೊಹಮ್ಮದ್ ಉಗ್ರ ಸಂಘಟನೆ ಕೈವಾಡ ಈ ದಾಳಿ ಹಿಂದೆ ಇದ್ದರೆ ಇಡೀ ಪಾಕಿಸ್ತಾನವನ್ನೇ ಏಕೆ ತೆಗಳಬೇಕು ಎಂದು ಹೇಳಿಕೆ ನೀಡಿದ್ದ ರಾಜಕಾರಣಿ ನವಜೋತ್ ಸಿಂಗ್ ಸಿಧು ಹೇಳಿಕೆ ಬೆನ್ನಲ್ಲೇ ಬಾನೂ ಹೇಳಿಕೆಯೂ ತೀವ್ರ ವಿವಾದಕ್ಕೆ ಕಾರಣವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು