
ಬೆಂಗಳೂರು [ಜು.29]: ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕೈ ಮುಖಂಡರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
"
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಗರಂ ಆಗಿದ್ದು, ಒಬ್ಬ ಸುಳ್ಳುಗಾರ, ಇನ್ನೊಬ್ಬ ಕೆಲಸಕ್ಕೆ ಬಾರದವ ಎಂದಿದ್ದಾರೆ.
ಕೃಷ್ಣ ಬೈರೇಗೌಡಗೆ ಸುಳ್ಳಿನ ಸರದಾರ ಎಂದು ಅವಾರ್ಡ್ ಕೊಡಬೇಕು. ಅವರು ಜೆಡಿಎಸ್ ನಿಂದ ಬಂದರೂ, ಅವರಿಗೆ ಮಂತ್ರಿ ಸ್ಥಾನ, ಮುಖ್ಯ ಹುದ್ದೆ ಕೊಡುತ್ತಾರೆ. ಆದರೆ ಅವರೊಬ್ಬ ಮೋಸಗಾರ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಅವರ ಬಗ್ಗೆ ಮಾತನಾಡಲು ನನಗೆ ಮನಸ್ಸಾಗುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
‘ಬಾಂಬೆಗೆ ಬಂದಿದ್ದೂ ಸೇರಿ ಡಿ.ಕೆ.ಶಿವಕುಮಾರ್ ಆಡಿದ್ದೆಲ್ಲಾ ನಾಟಕ’
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ವಿರುದ್ಧವೂ ಗರಂ ಆದ ಸೋಮಶೇಖರ್ ಅವರ ಮಾತನ್ನೂ ಯಾರೂ ಕೇಳಲ್ಲ. ಸಿಎಲ್ ಪಿ ನಾಯಕರ ಕೈಗೊಂಬೆ ಆತ. ಅವರು ಸೆಕೆಂಡ್ ಲೆವೆಲ್ ಕ್ಲರ್ಕ್ ಆಗಲು ಯೋಗ್ಯರಲ್ಲದ ನಾಯಕ ಎಂದು ತೀವ್ರ ಆಕ್ರೋಶ ಹೊರ ಹಾಕಿದರು.
ಅಸಮಾಧಾನಗೊಂಡು ರಾಜೀನಾಮೆ ನೀಡಿ 15 ಜನರೊಂದಿಗೆ ಮುಂಬೈಗೆ ತೆರಳಿದ್ದ ಸೋಮಶೇಖರ್ ನರ್ಹತೆಗೊಂಡ ಬಳಿಕ ಇದೀಗ ಬೆಂಗಳೂರಿಗೆ ಮರಳಿದ್ದಾರೆ. ಇದೇ ವೇಳೆ ಕೈ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.