ಶುಕ್ರವಾರ ಸಚಿವ ಸಂಪುಟ ರಚನೆ: ಮೊದಲ ಹಂತದಲ್ಲಿ ಸಚಿವರಾಗುವ ಸಂಭಾವ್ಯರ ಪಟ್ಟಿ

Published : Jul 29, 2019, 02:42 PM ISTUpdated : Jul 29, 2019, 08:37 PM IST
ಶುಕ್ರವಾರ ಸಚಿವ ಸಂಪುಟ ರಚನೆ: ಮೊದಲ ಹಂತದಲ್ಲಿ ಸಚಿವರಾಗುವ ಸಂಭಾವ್ಯರ ಪಟ್ಟಿ

ಸಾರಾಂಶ

ಶುಕ್ರವಾರ ಸಚಿವ ಸಂಪುಟ ರಚನೆ ಸಾಧ್ಯತೆ| ಕೇಂದ್ರ ನಾಯಕತ್ವದ ಅಂತಿಮ ಸೂಚನೆ ಮೇರೆಗೆ ಸಂಪುಟ ರಚನೆ| ನಾಳೆ ದೆಹಲಿಗೆ ತೆರಳುತ್ತಿರುವ ಸಿಎಂ ಮತ್ತು ಹಿರಿಯ ನಾಯಕರು| 10 ರಿಂದ 15 ಮಂದಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಾಧ್ಯತೆ| ಸ್ಪೀಕರ್ ಸ್ಥಾನದ ಅಭ್ಯರ್ಥಿ ಸಹ ಅಂತಿಮ ಸಾಧ್ಯತೆ| ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಬೆಂಗಳೂರು[ಜು.29]: ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ. ಬಳಿಕ ಇಂದು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದರು. ಇದೇ ವೇಳೆ ಅಗತ್ಯ ಮಸೂದೆಗಳನ್ನು ಮಂಡಿಸಿ ಅಂಗೀಕಾರವನ್ನೂ ಪಡೆದಿದ್ದರು. ಈ ಎಲ್ಲಾ ಕಾರ್ಯಗಳು ಮುಗಿಯುತ್ತಿದ್ದಂತೆಯೇ ಶುಕ್ರವಾರದಂದು ಸಚಿವ ಸಂಪುಟ ರಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

"

ಹಾಗಾದ್ರೆ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ಯಾರಿಗೆಲ್ಲಾ ಸಿಗುತ್ತೆ? ಇಲ್ಲಿದೆ ಸಂಭಾವ್ಯರ ಪಟ್ಟಿ

ವಿಶ್ವಾಸಮತ ಗೆದ್ದ ಯಡಿಯೂರಪ್ಪ: ಧ್ವನಿಮತದ ಮೂಲಕ ಅಂಗೀಕಾರ

ಕೇಂದ್ರ ನಾಯಕತ್ವದ ಅಂತಿಮ ಸೂಚನೆ ಮೇರೆಗೆ ಸಂಪುಟ ರಚನೆ ಮಾಡಲು ರಾಜ್ಯ ಬಿಜೆಪಿ ಸಜ್ಜಾಗಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು ಈ ಸಂಬಂಧ ಮಾತನಾಡಲು ನಾಳೆ ಮಂಗಳವಾರ ದೆಹಲಿಗೆ ತೆರಳುತ್ತಿದ್ದು, 10 ರಿಂದ 14 ಮಂದಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದ ಅಭ್ಯರ್ಥಿಯ ಹೆಸರೂ ಫೈನಲ್ ಆಗಲಿದೆ.

ಸಂಭಾವ್ಯ ಸಚಿವರ ಪಟ್ಟಿ

* ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರ

* ಜೆ.ಸಿ.ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ

* ಗೋವಿಂದ ಕಾರಜೋಳ, ಮುಧೋಳ 

* ಆರ್.ಅಶೋಕ್, ಪದ್ಮನಾಭ ನಗರ

* ಶ್ರೀರಾಮುಲು, ಮೊಳಕಾಲ್ಮೂರು

* ಸುನೀಲ್ ಕುಮಾರ್, ಕಾರ್ಕಳ

* ಎಸ್.ಅಂಗಾರ, ಸುಳ್ಯ

* ಎಸ್.ಎ.ರಾಮದಾಸ್, ಕೃಷ್ಣರಾಜ

* ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ

* ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ

* ಶಶಿಕಲಾ ಜೊಲ್ಲೆ, ನಿಪ್ಪಾಣಿ

* ಬಾಲಚಂದ್ರ ಜಾರಕಿಹೊಳಿ, ಅರಭಾವಿ

* ಉಮೇಶ್ ಕತ್ತಿ, ಹುಕ್ಕೇರಿ

* ರೇಣುಕಾಚಾರ್ಯ, ಹೊನ್ನಾಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!