‘ಬಾಂಬೆಗೆ ಬಂದಿದ್ದೂ ಸೇರಿ ಡಿ.ಕೆ.ಶಿವಕುಮಾರ್ ಆಡಿದ್ದೆಲ್ಲಾ ನಾಟಕ’

By Web DeskFirst Published Jul 29, 2019, 2:44 PM IST
Highlights

ರಾಜ್ಯದಲ್ಲಿ ಕೊಂಚ ಮಟ್ಟಿಗೆ ರಾಜಕೀಯ ಹೈ ಡ್ರಾಮಾ ಮುಗಿದಂತೆ ಕಾಣಿಸುತ್ತಿದೆ. ಬಿಜೆಪಿ ಸರ್ಕಾರ ರಚನೆ ಮಾಡಿ ವಿಶ್ವಾಸಮತದಲ್ಲಿಯೂ ಗೆಲುವು ಸಾಧಿಸಿದೆ. ಅತ್ತ ಅತೃಪ್ತರು ಅನರ್ಹರಾಗಿ ಕುಳಿತಿದ್ದಾರೆ. 

ಬೆಂಗಳೂರು [ಜು.29]: ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ 37 ಶಾಸಕರು ಅಮೃತ ಕುಡಿಯುತ್ತಿದ್ದರೆ 77 ಶಾಸಕರು ವಿಷ ಕುಡಿಯುತ್ತಿದ್ದರು ಎಂದು ಅನರ್ಹ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. 

ಈ ಹಿಂದೆ ದೋಸ್ತಿ ಸರ್ಕಾರದ ಬಗ್ಗೆ ನಮ್ಮ ಅಸಮಾಧಾನವನ್ನು CLPಸಭೆಯಲ್ಲಿಯೇ ಹೇಳಿದ್ದೆವು. ಆದರೆ ಸಮಸ್ಯೆ ಬಗೆಹರಿಸುವ ಪ್ರಯತ್ನ ನಾಯಕರು ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ಬಳಿ ಹೇಳಿಕೊಂಡಾಗಲೂ ಅವರು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ ಎಂದು ಸೋಮಶೇಖರ್ ಅಸಮಾಧಾನ ಹೊರಹಾಕಿದ್ದಾರೆ. 

ಕೈ ಕೊಟ್ಟ ಶಾಸಕ : ಬಿಜೆಪಿಗೆ ಸೇರ್ಪಡೆ

ಸಮಸ್ಯೆ ಬಗೆಹರಿಸುವ ಮನಸ್ಸಿದ್ದಿದ್ದರೆ ಸಭೆಯಲ್ಲಿ ಹೇಳಿದಾಗಲೇ ಕ್ರಮ ಕೈಗೊಳ್ಳಬೇಕಿತ್ತು. ನಾವು ಅಸಮಾಧಾನಿತರಾಗಿ ಮುಂಬೈಗೆ ತೆರಳಿದ ಮೇಲೆ ಡಿ.ಕೆ.ಶಿವಕುಮಾರ್ ಯಾಕೆ ಆಗಮಿಸಿದರು. ಅವರನ್ನು ಅಲ್ಲಿಗೆ ಕಳಿಸಿದ್ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಡಿ.ಕೆ.ಶಿವಕುಮಾರ್ ಬಾಂಬೆಗೆ ಬಂದು ಕಪಟ, ಬಣ್ಣದ ನಾಟಕವಾಡಿದ್ದಾರೆ. ಬಾಂಬೆಗೆ ಇವರನ್ನು ಕಳಿಸಿದ್ದು, ಯಾರು? ರಾಜೀನಾಮೆ ಕೊಟ್ಟ ಮೇಲೆ ನಮ್ಮನ್ನು ಮನ ಒಲಿಸುವ ಅಗತ್ಯ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

click me!