ಈ ದ್ವೀಪದ ಜನ ದಿನವೊಂದಕ್ಕೆ ತಿನ್ನುತ್ತಿದ್ದದ್ದು ಭರ್ತಿ 1600 ಪಕ್ಷಿ!

Published : Jan 01, 2017, 07:27 AM ISTUpdated : Apr 11, 2018, 12:50 PM IST
ಈ ದ್ವೀಪದ ಜನ ದಿನವೊಂದಕ್ಕೆ ತಿನ್ನುತ್ತಿದ್ದದ್ದು ಭರ್ತಿ 1600 ಪಕ್ಷಿ!

ಸಾರಾಂಶ

ಇಡೀ ದ್ವೀಪದ ಜನರು ಪ್ರತಿ ದಿನ ತಿನ್ನುತ್ತಿದ್ದದ್ದು ಬರೋಬ್ಬರಿ 3,240 ಮೊಟ್ಟೆಮತ್ತು 1,620 ಪಕ್ಷಿಗಳನ್ನು!

ಸಮೀಕ್ಷೆ ಸಂಗತಿ

ಏನೆಲ್ಲ ಬದಲಾವಣೆ ಆದರೂ ಹೊಸಬರಿಗೆ ಹಳಬರ ಜೀವನದ ಕುರಿತ ಆಸಕ್ತಿಗಳಿಗೆ ಮಾತ್ರ ಈಗಲೂ ಕೊಂಚವೂ ಕುಂದು ಉಂಟಾಗಿಲ್ಲ ಎಂಬ ಮಾತಿಗೆ ಮತ್ತೊಮ್ಮೆ ಪುರಾವೆ ದೊರೆತಿದೆ. 1764ರಲ್ಲಿ ನಡೆದ ಜನಸಂಖ್ಯಾ ಗಣತಿಯೊಂದರ ಅಂಕಿ-ಅಂಶಗಳು ಈಗ ಸುದ್ದಿ ಆಗುತ್ತಿರುವುದು ಮತ್ತು ಚರ್ಚೆಗೆ ಆಹಾರ ಆಗಿರುವುದು ಇದೇ ಕಾರಣಕ್ಕೆ. ಹೌದು, 1764ರಲ್ಲಿ ಸ್ಕಾಟ್ಲೆಂಡ್‌ ಬಳಿಯ ದ್ವೀಪ ಸಮೂಹದಲ್ಲಿ ನಡೆದ ಗಣತಿಯ­ಲ್ಲಿನ ಕೆಲವು ವಿಶೇಷ ಸಂಗತಿಗಳನ್ನು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಅಂಕಿ-ಅಂಶ ಸಂಗ್ರಹಾಲಯ ಬೆಳಕಿಗೆ ತಂದಿದೆ. ಈ ಅಂಕಿ-ಅಂಶಗಳ ಪೈಕಿ, ಸೇಂಟ್‌ ಕಿಲ್ಡಾ ದ್ವೀಪದ ಜನರು ದಿನವೊಂದಕ್ಕೆ ಬರೋಬ್ಬರಿ 1,600ಕ್ಕೂ ಹೆಚ್ಚು ಸಮುದ್ರ ಪಕ್ಷಿಗಳನ್ನು ಆಹಾರವನ್ನಾಗಿ ಬಳಸುತ್ತಿದ್ದರು ಎಂಬುದು ದೊಡ್ಡ ಸುದ್ದಿಯಾಗಿದೆ.

ಇನ್ನು, ಇದೇ ದ್ವೀಪಸಮೂಹದ ಪ್ರಮುಖ ದ್ವೀಪವಾದ ಹಿರ್ತಾ ನಾನಾ ಕಾರಣಕ್ಕೆ ಅಧ್ಯಯನಕಾರರ ಗಮನ ಸೆಳೆದಿದೆ. ಈ ದ್ವೀಪದಲ್ಲಿ ಒಟ್ಟು 38 ಮಂದಿ ಪುರುಷರು ಮತ್ತು 52 ಮಂದಿ ಮಹಿಳೆಯರನ್ನು ಒಳಗೊಂಡ 19 ಕುಟುಂಬಗಳು ಇದ್ದವಂತೆ. ಇವರಲ್ಲಿ ಪ್ರತಿಯೊಬ್ಬರೂ ದಿನವೊಂದಕ್ಕೆ ಒಟ್ಟು 18 ಕಾಡುಕೋಳಿ ಮತ್ತು 36 ಕಾಡುಕೋಳಿ ಮೊಟ್ಟೆಗಳನ್ನು ತಿನ್ನುತ್ತಿದ್ದರು. ಅಂದರೆ, ಇಡೀ ದ್ವೀಪದ ಜನರು ಪ್ರತಿ ದಿನ ತಿನ್ನುತ್ತಿದ್ದದ್ದು ಬರೋಬ್ಬರಿ 3,240 ಮೊಟ್ಟೆಮತ್ತು 1,620 ಪಕ್ಷಿಗಳನ್ನು!

ಸ್ಕಾಟ್ಲೆಂಡ್‌ ದ್ವೀಪಸಮೂಹದ ಜನಜೀವನದ ಬಗ್ಗೆ ಅಧ್ಯಯನ ಮಾಡುವವರಿಗೆ ಈ ಎಲ್ಲ ಅಂಕಿ-ಅಂಶಗಳಿರುವ ದಾಖಲೆಗಳು ವರವಾಗಿ ಪರಿಣಮಿಸಿವೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು