ಆರ್'ಬಿಐ'ನಲ್ಲಿ ಹಳೆಯ 500,1000 ನೋಟುಗಳ ವಿನಿಮಯ ಅವಧಿ ಜೂನ್'ವರೆಗೂ ವಿಸ್ತರಣೆ: ಆದರೆ ನಮಗಲ್ಲ

By Suvarna Web DeskFirst Published Jan 1, 2017, 6:57 AM IST
Highlights

ಹಳೆಯ ನೋಟು ವಿನಿಮಯ ಮಾರ್ಚ್ 31,2017 ರವರೆಗೂ ಲಭ್ಯವಿದೆ

ನವದೆಹಲಿ(ಜ.1): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಳೆಯ 500 ಮತ್ತು 1000 ರೂ. ನೋಟುಗಳ ವಿನಿಮಯ ಅವಧಿಯನ್ನು ಜೂನ್ 30,2017ರವರೆಗೆ ವಿಸ್ತರಿಸಿದ್ದು, ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗದೆ ಅನಿವಾಸಿ ಭಾರತೀಯರಿಗೆ ಮಾತ್ರ ಸಿಗಲಿದೆ.

ಆದಾಗ್ಯೂ ನೇಪಾಳ,ಭೂತಾನ್,ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರಿಗೆ ಈ ಸೇವೆ ಲಭ್ಯವಿಲ್ಲ.  ನವೆಂಬರ್ 9 2016 ರಿಂದ ಡಿಸೆಂಬರ್ 30, 2016 ರ ಅವಧಿಯಲ್ಲಿ ವಿದೇಶದಲ್ಲಿ ನೆಲಸಿದ್ದ ಭಾರತೀಯ ನಾಗರಿಕರಿಗೆ ಹಳೆಯ ನೋಟು ವಿನಿಮಯ ಮಾರ್ಚ್ 31,2017 ರವರೆಗೂ ಲಭ್ಯವಿದೆ.2016 ನವೆಂಬರ್ 9 ರಿಂದ ಡಿಸೆಂಬರ್ 30ರವರೆಗೂ ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಜೂನ್ 30,2017ರವರೆಗೂ ವಿನಿಮಯ ಮಾಡಿಕೊಳ್ಳಬಹುದು ಎಂದು ಪ್ರಧಾನಮಂತ್ರಿ ಭಾಷಣದ ನಂತರ ಆರ್'ಬಿಐ ಪ್ರಕಟಣೆ ತಿಳಿಸಿದೆ.

ನಿಗದಿಪಡಿಸಿರುವ ಅವಧಿಯಲ್ಲಿ ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ವಿನಿಮಯ ಮಾಡಿಕೊಳ್ಳುವ ಹಣಕ್ಕೆ ಯಾವುದೇ ಮಿತಿಯಿಲ್ಲ.ಆದರೆ ಅನಿವಾಸಿ ಭಾರತೀಯರಿಗೆ ಫೆಮಾ  ನಿಯಮಗಳು ಅನ್ವಯವಾಗಲಿದ್ದು, 25 ಸಾವಿರದವರೆಗೂ ವಿನಿಮಯ ಮಾಡಿಕೊಳ್ಳಬಹುದು. ಇವರುಗಳು ವಿನಿಮಯ ಅವಧಿಯಲ್ಲಿ ಆಧಾರ್, ಪಾನ್ ಮತ್ತಿತ್ತರ ಗುರುತು, ವಿದೇಶದಲ್ಲಿದ್ದ ಗುರುತು ಹಾಗೂ ಅನಿವಾಸಿಗಳು ನಿಗದಿಪಡಿಸಿರುವ ದಾಖಲೆಗಳನ್ನು ಒದಗಿಸಬೇಕು. ಹಣವನ್ನು ವೈಯುಕ್ತಿಕವಾಗಿ ಸ್ವತಃ ವ್ಯಕ್ತಿಯೇ ಪಡೆದುಕೊಳ್ಳಬೇಕು ವಿನಃ ಮೂರನೇ ವ್ಯಕ್ತಿಗೆ ಅವಕಾಶವಿಲ್ಲ.

click me!